April 15, 2026
Wednesday, April 15, 2026
spot_img

ಸೂರ್ಯನ ಸ್ಥಾನಕ್ಕೆ ಯಾರು? ಟೀಂ ಇಂಡಿಯಾ T20 ನಾಯಕತ್ವದ ರೇಸ್‌ನಲ್ಲಿದೆ ಐದು ಸ್ಟಾರ್ ಹೆಸರುಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ20 ವಿಶ್ವಕಪ್ ಗೆಲುವಿನ ಬಳಿಕವೂ ಭಾರತ ಟಿ20 ತಂಡದ ನಾಯಕ ಸೂರ್ಯ ಕುಮಾರ್ ಯಾದವ್ ಅವರ ಫಾರ್ಮ್ ಬಗ್ಗೆ ಚರ್ಚೆಗಳು ಜೋರಾಗಿವೆ. ಇತ್ತೀಚಿನ ಪ್ರದರ್ಶನದ ಹಿನ್ನೆಲೆ, ಬಿಸಿಸಿಐ ಭವಿಷ್ಯದ ಟೂರ್ನಿಗಳನ್ನು ಗಮನದಲ್ಲಿಟ್ಟು ಹೊಸ ನಾಯಕತ್ವ ಆಯ್ಕೆ ಬಗ್ಗೆ ಚಿಂತನೆ ನಡೆಸುತ್ತಿದೆ ಎಂಬ ವರದಿಗಳು ಹೊರಬಿದ್ದಿವೆ.

ಈ ರೇಸ್‌ನಲ್ಲಿ ಮೊದಲ ಹೆಸರಾಗಿ ಶ್ರೇಯಸ್ ಅಯ್ಯರ್ ಕಾಣಿಸಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ಹಲವು ತಂಡಗಳನ್ನು ಫೈನಲ್‌ಗೆ ಕೊಂಡೊಯ್ದ ನಾಯಕತ್ವ ಅನುಭವ ಅವರಿಗೆ ಬಲ ನೀಡಿದೆ. ಅದೇ ವೇಳೆ ಸಂಜು ಸ್ಯಾಮ್ಸನ್ ಕೂಡ ಪ್ರಮುಖ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ. ಇತ್ತೀಚಿನ ಐಪಿಎಲ್ ಪಂದ್ಯದಲ್ಲಿ ಅವರ ಶತಕ ಗಮನ ಸೆಳೆದಿದೆ.

ಇದನ್ನೂ ಓದಿ:

ಮತ್ತೊಂದೆಡೆ, ಹಾರ್ದಿಕ್ ಪಾಂಡ್ಯ ಅನುಭವ ಮತ್ತು ಆಕ್ರಮಣಕಾರಿ ನಾಯಕತ್ವದಿಂದ ಮುಂಚೂಣಿಯಲ್ಲಿದ್ದಾರೆ. ಮುಂಬೈ ಇಂಡಿಯನ್ಸ್ ನಾಯಕನಾಗಿ ಅವರ ನಿರ್ಧಾರಶಕ್ತಿ ತಂಡ ನಿರ್ವಹಣೆಗೆ ಸಹಕಾರಿ ಎನ್ನಲಾಗುತ್ತಿದೆ.

ಆಲ್‌ರೌಂಡರ್ ಅಕ್ಷರ್ ಪಟೇಲ್ ಹಾಗೂ ಶುಭ್‌ಮನ್ ಗಿಲ್ ಕೂಡ ಭವಿಷ್ಯದ ಆಯ್ಕೆಗಳಲ್ಲಿ ಪ್ರಮುಖ ಹೆಸರುಗಳಾಗಿದ್ದಾರೆ. ವಿಶೇಷವಾಗಿ ಗಿಲ್ ದೀರ್ಘಕಾಲದ ನಾಯಕತ್ವ ಯೋಜನೆಯಲ್ಲಿ ಸೂಕ್ತ ಅಭ್ಯರ್ಥಿ ಎಂದು ಪರಿಗಣಿಸಲಾಗುತ್ತಿದೆ.

ಒಟ್ಟಿನಲ್ಲಿ, 2028 ಟಿ20 ವಿಶ್ವಕಪ್ ದೃಷ್ಟಿಯಿಂದ ಟೀಂ ಇಂಡಿಯಾದ ನಾಯಕತ್ವದ ಕುರಿತ ಚರ್ಚೆ ಈಗಲೇ ಕಾವು ಪಡೆದುಕೊಂಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !