April 16, 2026
Thursday, April 16, 2026
spot_img

CSKಗೆ ಬಿಗ್ ಶಾಕ್: ಬೌಲಿಂಗ್ ವಿಭಾಗಕ್ಕೆ ‘ಸಂಕಷ್ಟ’; ಎಡಗೈ ವೇಗಿ ಟೂರ್ನಿಯಿಂದ ಔಟ್ ಅಂತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026ರ ನಡುವೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. ತಂಡದ ಪ್ರಮುಖ ಎಡಗೈ ವೇಗಿ ಖಲೀಲ್ ಅಹ್ಮದ್ ಗಾಯದ ಕಾರಣ ಉಳಿದ ಟೂರ್ನಿಯಿಂದ ಹೊರಗುಳಿದಿದ್ದಾರೆ. ಸೀಸನ್‌ನ ಮಹತ್ವದ ಹಂತದಲ್ಲಿ ಬಂದ ಈ ಸುದ್ದಿ ಸಿಎಸ್‌ಕೆ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

ಏಪ್ರಿಲ್ 14ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಖಲೀಲ್ ಅಹ್ಮದ್ ಬಲಗಾಲಿನ ಕ್ವಾಡ್ರಿಸೆಪ್ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಪಂದ್ಯದ ಮಧ್ಯದಲ್ಲೇ ಅವರು ನೋವಿನಿಂದ ಮೈದಾನ ತೊರೆಯಬೇಕಾಗಿತ್ತು. ಬಳಿಕ ನಡೆದ ವೈದ್ಯಕೀಯ ಪರೀಕ್ಷೆಯಲ್ಲಿ ಗಾಯ ಗಂಭೀರವಾಗಿದೆ ಎಂದು ದೃಢಪಟ್ಟಿದ್ದು, ಉಳಿದ ಪಂದ್ಯಗಳಿಗೆ ಅವರು ಲಭ್ಯರಾಗುವುದಿಲ್ಲ ಎಂದು ತಂಡದ ಮ್ಯಾನೇಜ್‌ಮೆಂಟ್ ತಿಳಿಸಿದೆ.

ಇದನ್ನೂ ಓದಿ:

ಖಲೀಲ್ ಈ ಸೀಸನ್‌ನಲ್ಲಿ ಪವರ್‌ಪ್ಲೇ ಓವರ್‌ಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಆರಂಭಿಕ ವಿಕೆಟ್‌ಗಳನ್ನು ಪಡೆಯುವಲ್ಲಿ ಅವರ ಪ್ರದರ್ಶನ ಸಿಎಸ್‌ಕೆಗೆ ಬಲವಾಗಿತ್ತು. ಅವರ ಅನುಪಸ್ಥಿತಿ ತಂಡದ ಬೌಲಿಂಗ್ ಸಂಯೋಜನೆಗೆ ದೊಡ್ಡ ಸವಾಲಾಗಲಿದೆ.

ಇದೀಗ ತಂಡವು ಮುಕೇಶ್ ಚೌಧರಿ, ಮ್ಯಾಟ್ ಹೆನ್ರಿ ಅಥವಾ ಅನ್ಶುಲ್ ಕಂಬೋಜ್ ಮೇಲೆ ಹೆಚ್ಚಿನ ಹೊಣೆಗಾರಿಕೆಯನ್ನು ಹಾಕುವ ಸಾಧ್ಯತೆ ಇದೆ. ಮುಂದಿನ ಪಂದ್ಯಗಳಲ್ಲಿ ಹೊಸ ಬೌಲಿಂಗ್ ಕಾಂಬಿನೇಶನ್‌ನ್ನು ಪ್ರಯೋಗಿಸುವ ನಿರೀಕ್ಷೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !