October 16, 2026
Friday, October 16, 2026
spot_img

ಪಲ್ಯ, ಗ್ರೇವಿ & More 63 | ಕರಾವಳಿಯ ಸೊಬಗು ಒಣಮೀನಿನ ಸಾರು, ನಿಮ್ಮನೆಯೂ ಘಮ್‌ ಎನ್ನಲಿದೆ

ಹೇಗೆ ಮಾಡೋದು?
ಮೊದಲು ಒಣಮೀನನ್ನು ಕ್ಲೀನ್‌ ಮಾಡಿಕೊಂಡು ಬಿಸಿನೀರು ಹಾಕಿ ಇಡಿ
ನಂತರ ಪ್ಯಾನ್‌ಗೆ ಎಣ್ಣೆ ಚಕ್ಕೆ ಲವಂಗ ಬೆಳ್ಳುಳ್ಳಿ ಶುಂಠಿ ಹಾಕಿ
ನಂತರ ಕೊತ್ತಂಬರಿ ಕಾಳು, ಈರುಳ್ಳಿ ಹಾಕಿ ಮಿಕ್ಸ್‌ ಮಾಡಿ
ಆನಂತರ ಇದಕ್ಕೆ ಸ್ವಲ್ಪ ಟೊಮ್ಯಾಟೊ ಹಾಕಿ. ಒಣಮೆಣಸಿನಕಾಯಿ ಹಾಕಿ
ಆಮೇಲೆ ಕಡ್ಲೆ, ಗಸಗಸೆ, ಹುಣಸೆಹಣ್ಣು ಹಾಕಿ ಮಿಕ್ಸ್‌ ಮಾಡಿ
ಕಡೆಗೆ ಆಫ್‌ ಮಾಡಿ ಕಾಯಿ, ಕೊತ್ತಂಬರಿ ಸೊಪ್ಪು, ಖಾರದಪುಡಿ, ಕೊತ್ತಂಬರಿ ಪುಡಿ ಹಾಕಿ ರುಬ್ಬಿಕೊಳ್ಳಿ

ಆಮೇಲೆ ಮತ್ತೆ ಕುಕ್ಕರ್‌ಗೆ ಎಣ್ಣೆ ಹಾಕಿ, ಈರುಳ್ಳಿ ಹಾಕಿ ಬಾಡಿಸಿ, ಯಾವುದಾದರೂ ಕಾಳುಗಳು ಹಾಗೂ ಆಲೂಗಡ್ಡೆ, ಬದನೆಕಾಯಿ ಹಾಕಿ
ಆನಂತರ ಮಿಕ್ಸಿಯ ಮಸಾಲೆ ಹಾಕಿ, ಉಪ್ಪು ಹಾಕಿ ಕುದಿಸಿ.
ಆಮೇಲೆ ಕಾಳುಗಳೆಲ್ಲ ಬೇಯಲು ವಿಶಲ್‌ ಹಾಕಿಸಿ ಅಥವಾ ಹಾಗೆಯೇ ಕುದಿಸಿ
ನಂತರ ಎಣ್ಣೆಯಲ್ಲಿ ಹುರಿದ ಒಣಮೀನನ್ನು ಹಾಕಿ ಐದು ನಿಮಿಷ ಕುದಿಸಿದ್ರೆ ಸಾರು ರೆಡಿ

Must Read