April 20, 2026
Monday, April 20, 2026
spot_img

ಸೆಕೆಂಡ್ ರೌಂಡ್ ಮಾತುಕತೆ ವಿಫಲವಾದ್ರೆ….ಇರಾನ್‌ ಸುಟ್ಟು ಭಸ್ಮವಾಗುತ್ತೆ: ಟ್ರಂಪ್ ವಾರ್ನಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಮತ್ತೊಮ್ಮೆ ಗಂಭೀರ ಹಂತ ತಲುಪಿದ್ದು, ಕದನ ವಿರಾಮ ಮುಕ್ತಾಯದ ಗಡಿಯಾರ ಟಿಕ್ ಟಿಕ್ ಮಾಡುತ್ತಿದೆ. ಈ ನಡುವೆ ಎರಡನೇ ಸುತ್ತಿನ ಮಾತುಕತೆ ನಡೆಯಲಿರುವುದಾಗಿ ಘೋಷಣೆ ಆಗಿದ್ದರೂ, ಯುದ್ಧ ಭೀತಿ ಇನ್ನೂ ಕಡಿಮೆಯಾಗಿಲ್ಲ.

ಘೋಷಿತ ಕದನ ವಿರಾಮ ಕೊನೆಗಾಣಲು ಇನ್ನೂ ಮೂರು ದಿನ ಮಾತ್ರ ಬಾಕಿ ಇರುವ ಹಿನ್ನೆಲೆ, ಮುಂದಿನ ಬೆಳವಣಿಗೆಗಳ ಮೇಲೆ ಜಗತ್ತಿನ ಗಮನ ನೆಟ್ಟಿದೆ. ಮೊದಲ ಸುತ್ತಿನ ಮಾತುಕತೆ ಫಲಕಾರಿಯಾಗದ ಹಿನ್ನೆಲೆ, ಇದೀಗ ಎರಡನೇ ಸುತ್ತಿನ ಚರ್ಚೆ ಇಸ್ಲಾಮಾಬಾದ್‌ನಲ್ಲಿ ನಡೆಯಲಿದೆ. ಈ ಕುರಿತು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಹಿತಿ ನೀಡಿದ್ದು, ಅಮೆರಿಕದ ಪ್ರತಿನಿಧಿ ತಂಡ ಶೀಘ್ರದಲ್ಲೇ ಪಾಕಿಸ್ತಾನಕ್ಕೆ ತೆರಳಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:

ಆದರೆ ಈ ಮಾತುಕತೆಗೆ ಅಮೆರಿಕ ಉಪಾಧ್ಯಕ್ಷ JD Vance ಭಾಗವಹಿಸುವುದಿಲ್ಲ ಎನ್ನುವುದು ಗಮನಾರ್ಹವಾಗಿದೆ. ಇದೇ ವೇಳೆ ಟ್ರಂಪ್ ಕಠಿಣ ಎಚ್ಚರಿಕೆ ನೀಡಿದ್ದು, ಈ ಸುತ್ತಿನ ಮಾತುಕತೆಯಲ್ಲಿಯೂ ಒಪ್ಪಂದ ಸಾಧ್ಯವಾಗದಿದ್ದರೆ ಇರಾನ್ ನಾಶವಾಗಿ ಹೋಗುತ್ತದೆ ಎಂದು ಹೇಳಿದ್ದಾರೆ.

“ನ್ಯಾಯಸಮ್ಮತ ಒಪ್ಪಂದಕ್ಕೆ ನಾವು ಸಿದ್ಧ. ಇರಾನ್ ಸಹ ಒಪ್ಪಿಕೊಳ್ಳಲಿದೆ ಎಂದು ಭಾವಿಸಿದ್ದೇನೆ. ಆದರೆ ಒಪ್ಪದಿದ್ದರೆ ಇರಾನ್‌ನ ಸೈನಿಕ ಶಕ್ತಿಯನ್ನು ಸಂಪೂರ್ಣವಾಗಿ ನಾಶಪಡಿಸುವುದಕ್ಕೂ ನಾವು ಹಿಂದೇಟು ಹಾಕುವುದಿಲ್ಲ,” ಎಂದು ಟ್ರಂಪ್ ಹೇಳಿದ್ದಾರೆ. ದೇಶದ ಪ್ರಮುಖ ಮೂಲಸೌಕರ್ಯಗಳಾದ ವಿದ್ಯುತ್ ಘಟಕಗಳು ಮತ್ತು ಸೇತುವೆಗಳ ಮೇಲೆ ದಾಳಿ ಮಾಡುವ ಎಚ್ಚರಿಕೆಯನ್ನೂ ನೀಡಿದ್ದಾರೆ.

ಒಟ್ಟಿನಲ್ಲಿ, ಮಾತುಕತೆ ನಡೆಯಲಿರುವಾಗಲೇ ಇಂತಹ ಕಠಿಣ ಹೇಳಿಕೆಗಳು ಹೊರಬಂದಿರುವುದು, ಪರಿಸ್ಥಿತಿಯನ್ನು ಇನ್ನಷ್ಟು ಉದ್ವಿಗ್ನಗೊಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !