August 30, 2026
Sunday, August 30, 2026
spot_img

HAIRCARE | ದೇಹ ತಂಪಾಗೋಕೆ, ಬಿಳಿಕೂದಲನ್ನು ಓಡಿಸೋಕೆ ತಲೆಗೆ ಮೆಹೆಂದಿ ಹಚ್ಚಿ, ಹೇಗೆ ಗೊತ್ತಾ?

ಮೆಹೆಂದಿ ಅಭ್ಯಾಸ ಇಲ್ಲ, ಅದು ತಂಪು ನಮಗೆ ಶೀತ ಆಗುತ್ತೆ ಅನ್ನೋರು ಬೇಸಿಗೆಯ ಅಡ್ವಾಂಟೇಜ್‌ ತಗೊಳಿ. ಬೇಸಿಗೆಯಲ್ಲಿ ಇನ್ನು ನಿಮ್ಮ ದೇಹ ಕೂಲ್‌ ಆಗಿದ್ರೆನೆ ಬೆಸ್ಟ್‌. ಮೆಹೆಂದಿಯನ್ನು ತಲೆಗೆ ಹಚ್ಚೋದ್ರಿಂದ ಆರೋಗ್ಯವೂ ಚೆನ್ನಾಗಿರುತ್ತದೆ. ಹಾಗೆ ಬಿಳಿಕೂದಲು ಕೂಡ ಮಾಯವಾಗುತ್ತವೆ. ಇದರ ಪ್ರೊಸೆಸ್‌ ಏನು?

ಯಾವುದೇ ಹೆನ್ನಾ ಪೌಡರ್‌ ತನ್ನಿ. ನಿಮಗೆ ಬ್ರೌನ್‌ ಕೂದಲು ಬೇಕು ಅನ್ನೋದಾದ್ರೆ ಕಾಫಿಯ ಡಿಕಾಕ್ಷನ್‌ ರೆಡಿ ಮಾಡಿ ಇಟ್ಟುಕೊಳ್ಳಿ.

ಇನ್ನು ಮೆಜೆಂತಾ ಕಲರ್‌ ಕೂದಲು ಬೇಕು ಅನ್ನೋದಾದ್ರೆ ಟೀಪುಡಿಯ ಡಿಕಾಕ್ಷನ್‌ ಮಾಡಿ ಇಟ್ಟುಕೊಳ್ಳಿ. ಬೀಟ್ರೂಟ್‌ ರಸವನ್ನೂ ಹಾಕಬಹುದು

ಕಬ್ಬಿಣದ ಬಾಣಲೆಯಲ್ಲಿ ಮೆಹೆಂದಿ ಪುಡಿ, ಟೀ ಅಥವಾ ಕಾಫಿಯ ಡಿಕಾಕ್ಷನ್‌ ಹಾಕಿ

ಮೊಸರು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ ಎಂಟರಿಂದ ಹತ್ತು ಗಂಟೆ ನೆನೆಯಲು ಬಿಡಿ

ಆನಂತರ ಮೆಹೆಂದಿಯನ್ನು ಕೂದಲಿಗೆ ಹಚ್ಚಿ ಕ್ಲೀನ್‌ ಆಗಿ ತುರುಬಿನ ರೀತಿ ಮಾಡಿಕೊಳ್ಳಿ. ಅದನ್ನು ಮೂರು ನಾಲ್ಕು ಗಂಟೆ ನೆನೆಯಲು ಬಿಡಿ

ಆನಂತರ ಬೆಚ್ಚಗಿನ ನೀರಿನಲ್ಲಿ ತಲೆ ಸ್ನಾನ ಮಾಡಿ. ಕೂದಲು ಒಣಗಿದ ನಂತರ ಎಣ್ಣೆ ಹಚ್ಚಿ ಮತ್ತೊಮ್ಮೆ ತಲೆಸ್ನಾನ ಮಾಡಿ. ಇದು ಬಣ್ಣ ಗಾಢವಾಗುವಂತೆ ನೋಡಿಕೊಳ್ಳುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !