April 21, 2026
Tuesday, April 21, 2026
spot_img

ಅಫ್ಘಾನ್ ಟೆಸ್ಟ್‌ಗೆ ಹೊಸ ಮುಖಗಳ ಎಂಟ್ರಿ: ಸ್ಟಾರ್ ಆಟಗಾರರಿಗೆ ವಿಶ್ರಾಂತಿ ಕೊಡೋಕೆ BCCI ಪ್ಲಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026 ಮುಕ್ತಾಯವಾದ ತಕ್ಷಣ ನಡೆಯಲಿರುವ ಭಾರತ–ಅಫ್ಘಾನಿಸ್ತಾನ್ ಟೆಸ್ಟ್ ಪಂದ್ಯಕ್ಕೆ ತಂಡದಲ್ಲಿ ದೊಡ್ಡ ಬದಲಾವಣೆಗಳ ಸಾಧ್ಯತೆ ಕಂಡುಬರುತ್ತಿದೆ. ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ, ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಯುವ ಪ್ರತಿಭೆಗಳಿಗೆ ಅವಕಾಶ ನೀಡಲು ಬಿಸಿಸಿಐ ಚಿಂತನೆ ನಡೆಸುತ್ತಿದೆ.

ವರದಿಗಳ ಪ್ರಕಾರ, ಈ ಪಂದ್ಯಕ್ಕೆ ನಾಲ್ವರು ಹೊಸ ಆಟಗಾರರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ವಿದರ್ಭದ ಹರ್ಷ್ ದುಬೆ, ರಾಜಸ್ಥಾನದ ಮಾನವ್ ಸುತಾರ್, ಜಮ್ಮು-ಕಾಶ್ಮೀರದ ಆಖಿಬ್ ನಬಿ ಹಾಗೂ ಪಂಜಾಬ್‌ನ ಗುರ್ನೂರ್ ಬ್ರಾರ್ ಹೆಸರುಗಳು ಮುಂದಿವೆ. ಇವರಿಗೆ ಮೊದಲ ಬಾರಿಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಗುವ ನಿರೀಕ್ಷೆ ಹೆಚ್ಚಾಗಿದೆ.

ಇದನ್ನೂ ಓದಿ:

ಇನ್ನೊಂದೆಡೆ, ಕರ್ನಾಟಕದ ಬ್ಯಾಟರ್ ದೇವದತ್ ಪಡಿಕ್ಕಲ್ ಟೆಸ್ಟ್ ತಂಡಕ್ಕೆ ಮರಳುವ ಸಾಧ್ಯತೆ ಇದೆ. ಇಂಗ್ಲೆಂಡ್ ವಿರುದ್ಧದ ತಮ್ಮ ಮೊದಲ ಪಂದ್ಯದಲ್ಲಿ ಉತ್ತಮ ಆಟವಾಡಿದ್ದ ಅವರು, ಇದೀಗ ಮತ್ತೆ ಅವಕಾಶ ಪಡೆಯುವ ಹಂತದಲ್ಲಿದ್ದಾರೆ.

ಇದೇ ವೇಳೆ, ಭಾರತ ಟೆಸ್ಟ್ ತಂಡದ ನಾಯಕ ಶುಭ್​​ಮನ್ ಗಿಲ್, ವೇಗಿ ಜಸ್​ಪ್ರೀತ್ ಬುಮ್ರಾ ಹಾಗೂ ಕೆಎಲ್ ರಾಹುಲ್ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಐಪಿಎಲ್ ಫೈನಲ್ ನಂತರ ಕೇವಲ ಕೆಲವೇ ದಿನಗಳಲ್ಲಿ ಟೆಸ್ಟ್ ಆರಂಭವಾಗುತ್ತಿರುವುದರಿಂದ ಆಟಗಾರರ ಮೇಲೆ ಒತ್ತಡ ಕಡಿಮೆ ಮಾಡುವ ಉದ್ದೇಶ ಇದಾಗಿದೆ.

ಜೂನ್ 6ರಿಂದ ಈ ಏಕೈಕ ಟೆಸ್ಟ್ ಆರಂಭವಾಗಲಿದ್ದು, ಬಳಿಕ ಮೂರು ಏಕದಿನ ಪಂದ್ಯಗಳ ಸರಣಿ ನಡೆಯಲಿದೆ. ಈ ಟೆಸ್ಟ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ವ್ಯಾಪ್ತಿಗೆ ಸೇರದ ಕಾರಣ, ಯುವ ಆಟಗಾರರಿಗೆ ಅವಕಾಶ ನೀಡುವತ್ತ ಬಿಸಿಸಿಐ ಒಲವು ತೋರಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !