April 21, 2026
Tuesday, April 21, 2026
spot_img

ಕಂಪನಿ ಕಾರ್ಡ್ ಬಳಸಿ ಲಕ್ಷಾಂತರ ರೂ ‘ಗುಳುಂ’ ಮಾಡಿದ ಟೆಕ್ಕಿ: ಸಿಕ್ಕಿ ಬಿದ್ಮೇಲೆ ನಡೆದಿದ್ದು ಹೈ ಡ್ರಾಮಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾರ್ಪೊರೇಟ್ ಕ್ರೆಡಿಟ್ ಕಾರ್ಡ್ ದುರ್ಬಳಕೆ ಪ್ರಕರಣದಲ್ಲಿ ಐಟಿ ಉದ್ಯೋಗಿಯೊಬ್ಬರ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಕಂಪನಿಯ ಖರ್ಚುಗಳಿಗೆ ನೀಡಲಾಗಿದ್ದ ಕಾರ್ಡ್‌ನಿಂದ ಲಕ್ಷಾಂತರ ರೂಪಾಯಿ ಅನಧಿಕೃತವಾಗಿ ಬಳಸಿದ ಈ ಉದ್ಯೋಗಿ, ವಿಚಾರ ಹೊರಬಿದ್ದ ನಂತರ ಹಿರಿಯ ಅಧಿಕಾರಿಗಳಿಗೆ ಆತ್ಮಹತ್ಯೆ ಬೆದರಿಕೆ ಹಾಕಿರುವುದು ಪ್ರಕರಣಕ್ಕೆ ಮತ್ತಷ್ಟು ತೀವ್ರತೆ ತಂದಿದೆ.

ಮೂಲಗಳ ಪ್ರಕಾರ, 2 ಲಕ್ಷ ರೂ ಮಿತಿಯ ಕಾರ್ಡ್ ಹೊಂದಿದ್ದ ಉದ್ಯೋಗಿ, 2023ರ ಅಕ್ಟೋಬರ್‌ನಿಂದ 2024ರ ಜನವರಿವರೆಗೆ ಸುಮಾರು 27 ಲಕ್ಷ ರೂ ವ್ಯವಹಾರ ನಡೆಸಿದ್ದಾನೆ. ಆಂತರಿಕ ಪರಿಶೀಲನೆ ವೇಳೆ ಈ ಅನಿಯಮಿತ ವ್ಯವಹಾರ ಬೆಳಕಿಗೆ ಬಂದಿದೆ. ಬಳಿಕ ಕಂಪನಿ ವಿವರಣೆ ಕೇಳಿದಾಗ, ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

ಇದನ್ನೂ ಓದಿ:

ವಿಚಿತ್ರವೆಂದರೆ, ಚೀನಾ ಮತ್ತು ಪಾಕಿಸ್ತಾನದ ಅಪರಿಚಿತರಿಂದ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಹಣ ಬಳಸಿದ್ದಾಗಿ ಆತ ಹೇಳಿಕೊಂಡಿದ್ದಾನೆ. ಹಣವನ್ನು ಹಂತ ಹಂತವಾಗಿ ಮರಳಿಸುವುದಾಗಿ ಭರವಸೆ ನೀಡಿದ್ದರೂ, ಯಾವುದೇ ಮೊತ್ತವನ್ನು ಪಾವತಿಸಿಲ್ಲ ಎನ್ನಲಾಗಿದೆ.

ಈ ನಡುವೆ, ಫೆಬ್ರವರಿ 9ರಂದು ಆತ ಹಿರಿಯ ಅಧಿಕಾರಿಗೆ ಅಶ್ಲೀಲ ಚಿತ್ರಗಳನ್ನು ಕಳುಹಿಸಿ ಆತ್ಮಹತ್ಯೆ ಬೆದರಿಕೆ ಹಾಕಿದ್ದಾನೆ. ಇದರಿಂದ ಆತಂಕಗೊಂಡ ಕಂಪನಿ ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಎಲ್ಲಾ ಕೋನಗಳಿಂದ ತನಿಖೆ ಮುಂದುವರೆಸಿದ್ದು, ನಿಜಾಂಶ ಹೊರಬರುವ ನಿರೀಕ್ಷೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !