ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾರ್ಪೊರೇಟ್ ಕ್ರೆಡಿಟ್ ಕಾರ್ಡ್ ದುರ್ಬಳಕೆ ಪ್ರಕರಣದಲ್ಲಿ ಐಟಿ ಉದ್ಯೋಗಿಯೊಬ್ಬರ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಕಂಪನಿಯ ಖರ್ಚುಗಳಿಗೆ ನೀಡಲಾಗಿದ್ದ ಕಾರ್ಡ್‌ನಿಂದ ಲಕ್ಷಾಂತರ ರೂಪಾಯಿ ಅನಧಿಕೃತವಾಗಿ ಬಳಸಿದ ಈ ಉದ್ಯೋಗಿ, ವಿಚಾರ ಹೊರಬಿದ್ದ ನಂತರ ಹಿರಿಯ ಅಧಿಕಾರಿಗಳಿಗೆ ಆತ್ಮಹತ್ಯೆ ಬೆದರಿಕೆ ಹಾಕಿರುವುದು ಪ್ರಕರಣಕ್ಕೆ ಮತ್ತಷ್ಟು ತೀವ್ರತೆ ತಂದಿದೆ.
ಮೂಲಗಳ ಪ್ರಕಾರ, 2 ಲಕ್ಷ ರೂ ಮಿತಿಯ ಕಾರ್ಡ್ ಹೊಂದಿದ್ದ ಉದ್ಯೋಗಿ, 2023ರ ಅಕ್ಟೋಬರ್‌ನಿಂದ 2024ರ ಜನವರಿವರೆಗೆ ಸುಮಾರು 27 ಲಕ್ಷ ರೂ ವ್ಯವಹಾರ ನಡೆಸಿದ್ದಾನೆ. ಆಂತರಿಕ ಪರಿಶೀಲನೆ ವೇಳೆ ಈ ಅನಿಯಮಿತ ವ್ಯವಹಾರ ಬೆಳಕಿಗೆ ಬಂದಿದೆ. ಬಳಿಕ ಕಂಪನಿ ವಿವರಣೆ ಕೇಳಿದಾಗ, ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.
ಇದನ್ನೂ ಓದಿ:
ವಿಚಿತ್ರವೆಂದರೆ, ಚೀನಾ ಮತ್ತು ಪಾಕಿಸ್ತಾನದ ಅಪರಿಚಿತರಿಂದ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಹಣ ಬಳಸಿದ್ದಾಗಿ ಆತ ಹೇಳಿಕೊಂಡಿದ್ದಾನೆ. ಹಣವನ್ನು ಹಂತ ಹಂತವಾಗಿ ಮರಳಿಸುವುದಾಗಿ ಭರವಸೆ ನೀಡಿದ್ದರೂ, ಯಾವುದೇ ಮೊತ್ತವನ್ನು ಪಾವತಿಸಿಲ್ಲ ಎನ್ನಲಾಗಿದೆ.
ಈ ನಡುವೆ, ಫೆಬ್ರವರಿ 9ರಂದು ಆತ ಹಿರಿಯ ಅಧಿಕಾರಿಗೆ ಅಶ್ಲೀಲ ಚಿತ್ರಗಳನ್ನು ಕಳುಹಿಸಿ ಆತ್ಮಹತ್ಯೆ ಬೆದರಿಕೆ ಹಾಕಿದ್ದಾನೆ. ಇದರಿಂದ ಆತಂಕಗೊಂಡ ಕಂಪನಿ ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಎಲ್ಲಾ ಕೋನಗಳಿಂದ ತನಿಖೆ ಮುಂದುವರೆಸಿದ್ದು, ನಿಜಾಂಶ ಹೊರಬರುವ ನಿರೀಕ್ಷೆಯಿದೆ.



