May 20, 2026
Wednesday, May 20, 2026
spot_img

ಮಹಿಳೆಯರ ರಾಜಕಾರಣ ನಾಯಕರ ಬೆಡ್ ರೂಂನಿಂದ ಶುರುವಾಗುತ್ತಂತೆ: ಛೀ… ಥೂ..’ಪಪ್ಪು’ ಬಾಯಲ್ಲಿ ಇದೆಂತಹ ಮಾತು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಿಳೆಯರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಬಿಹಾರದ ಪೂರ್ಣಿಯದ ಸಂಸದ ಪಪ್ಪು ಯಾದವ್ ವಿರುದ್ಧ ವಿವಾದ ಭುಗಿಲೆದ್ದಿದೆ. ಈ ಹೇಳಿಕೆ ಸಂಬಂಧ ಬಿಹಾರ ರಾಜ್ಯ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿದ್ದು, ಅಗತ್ಯವಿದ್ದರೆ ಲೋಕಸಭಾ ಸದಸ್ಯತ್ವ ರದ್ದುಪಡಿಸಲು ಶಿಫಾರಸು ಮಾಡುವ ಎಚ್ಚರಿಕೆ ನೀಡಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ವೇಳೆ ಪಪ್ಪು ಯಾದವ್, ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಸಿಗುತ್ತಿಲ್ಲ ಎಂದು ಆರೋಪಿಸಿದರು. ಸಮಾಜದಲ್ಲಿ ಮಹಿಳೆಯನ್ನು ದೇವತೆ ಎಂದು ಕಾಣಿಸಿದರೂ, ನಿಜ ಜೀವನದಲ್ಲಿ ಅವರಿಗೆ ಭದ್ರತೆ ಮತ್ತು ಗೌರವ ಕೊರತೆಯಿದೆ ಎಂದು ಹೇಳಿದರು. ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರ ಬೆಳವಣಿಗೆಗೆ ಹಲವು ಅಡೆತಡೆಗಳಿವೆ. ಕಟು ಸತ್ಯವೆಂದರೆ ಶೇಕಡ 90ರಷ್ಟು ಮಹಿಳಾ ರಾಜಕೀಯ ವೃತ್ತಿಜೀವನವು ರಾಜಕಾರಣಿಗಳ ಹಾಸಿಗೆಯಲ್ಲಿ ಪ್ರಾರಂಭವಾಗುತ್ತದೆ ಎಂದರು.

ಇದಕ್ಕೆ ಜೊತೆಗೆ, ಶಾಸನಸಭೆ ಮತ್ತು ಸಂಸತ್ತಿನಲ್ಲಿ ಮಹಿಳೆಯರ ವಿರುದ್ಧ ಅಸಭ್ಯ ವರ್ತನೆ ನಡೆಯುತ್ತದೆ ಎಂಬ ಆರೋಪವನ್ನೂ ಅವರು ಮಾಡಿದರು. ಕೆಲವು ರಾಜಕಾರಣಿಗಳ ನಡೆ ಬಗ್ಗೆ ಪ್ರಶ್ನೆ ಎತ್ತಿದ ಅವರು, ವ್ಯವಸ್ಥೆಯಲ್ಲಿ ಸುಧಾರಣೆ ಅಗತ್ಯವಿದೆ ಎಂದರು.

ಇದನ್ನೂ ಓದಿ:

ಮಹಿಳಾ ಮೀಸಲಾತಿ ಕಾಯ್ದೆಯ ಬಗ್ಗೆ ಮಾತನಾಡಿದ ಪಪ್ಪು ಯಾದವ್, ಇದು ಸಂಪೂರ್ಣ ಪರಿಣಾಮಕಾರಿ ಆಗಬೇಕಾದರೆ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಪ್ರತ್ಯೇಕ ಅವಕಾಶ ನೀಡಬೇಕು ಎಂದು ಅಭಿಪ್ರಾಯಪಟ್ಟರು. ಇಲ್ಲವಾದರೆ ಅದರ ಲಾಭವು ಸೀಮಿತವಾಗುತ್ತದೆ ಎಂದರು.

ಈ ಹೇಳಿಕೆಗಳು ಸಾಮಾಜಿಕ ಹಾಗೂ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ದಿನಗಳಲ್ಲಿ ಈ ವಿಷಯ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !