August 25, 2026
Tuesday, August 25, 2026
spot_img

ಮಾತುಕತೆಗೆ ಬನ್ನಿ, ಇಲ್ಲವೇ ಬಾಂಬ್ ದಾಳಿ ಎದುರಿಸಲು ಸಜ್ಜಾಗಿ: ಇರಾನ್ ಗೆ ಟ್ರಂಪ್ ಎಚ್ಚರಿಕೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ತಾರಕ್ಕೇರಿದ್ದು, ಇರಾನ್, ಅಮೆರಿಕ ನಡುವಿನ ಮತ್ತೊಂದು ಸುತ್ತಿನ ಮಾತುಕತೆಗೆ ಪಾಕಿಸ್ತಾನ ವೇದಿಕೆ ಸಿದ್ಧಗೊಳಿಸಿದೆ. ಇದರ ನಡುವೆ ಡೊನಾಲ್ಡ್ ಟ್ರಂಪ್, ಬುಧವಾರ ಸಂಜೆಯೊಳಗೆ ಮಾತುಕತೆಗೆ ಬನ್ನಿ ಇಲ್ಲವಾದರೆ ಅಮೆರಿಕದ ಯುದ್ಧವಿಮಾನಗಳು ಬಾಂಬ್ ದಾಳಿ ನಡೆಸಲು ಸಜ್ಜಾಗಿವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಖಾಸಗಿ ಮಾದ್ಯಮಕ್ಕೆ ಫೋನ್ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, ಇರಾನ್ ಗೆ ಸಂಧಾನವೇ ಕೊನೆಯ ದಾರಿಯಾಗಿದೆ. ಹೀಗಾಗಿ ದೊಡ್ಡ ಒಪ್ಪಂದ ಮಾಡಿಕೊಳ್ಳುತ್ತೇವೆ ಎಂಬ ಭರವಸೆ ಇದೆ ಎಂದು ತಿಳಿಸಿದರು.

ಹಾರ್ಮುಜ್ ಜಲಸಂಧಿ ಸಂಪೂರ್ಣ ಅಮೆರಿಕದ ಹಿಡಿತದಲ್ಲಿದೆ. ಇದಕ್ಕೆ ನಮ್ಮ ದಿಗ್ಬಂಧನ ತಂತ್ರ ಪ್ರಮುಖ ಕಾರಣ. ಹೀಗಾಗಿ ಇರಾನ್ ಉತ್ತಮ ಸಂಧಾನ ನಡೆಸಿದರೆ, ಮುಂದಿನ ದಿನಗಳಲ್ಲಿ ಒಂದು ಸುಂದರ ರಾಷ್ಟ್ರ ನಿರ್ಮಾಣಕ್ಕೆ ಅಮೆರಿಕ ಬೆಂಬಲ ನೀಡಲಿದೆ ಎಂದು ತಿಳಿಸಿದರು.

ಒಂದು ವೇಳೆ ಮಾತುಕತೆ ವಿಫಲವಾದರೆ ಇರಾನ್ ಮೇಲೆ ದಾಳಿ ಖಚಿತ. ನಮ್ಮ ಸೇನೆ ದಾಳಿಗಾಗಿ ಸಜ್ಜಾಗಿ ನಿಂತಿದೆ ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !