October 10, 2026
Saturday, October 10, 2026
spot_img

ಗಲ್ಫ್‌ನಲ್ಲಿ ವಶಪಡಿಸಿಕೊಂಡ ಹಡಗಿಗೂ ನಮಗೂ ಸಂಬಂಧವಿಲ್ಲ: ಚೀನಾ ಸ್ಪಷ್ಟನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗಲ್ಫ್ ಪ್ರದೇಶದಲ್ಲಿ ಅಮೆರಿಕ ವಶಪಡಿಸಿಕೊಂಡ ಹಡಗು ವಿಚಾರವು ಅಂತಾರಾಷ್ಟ್ರೀಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇರಾನ್‌ಗೆ ಕ್ಷಿಪಣಿ ತಯಾರಿಕೆಗೆ ಬಳಸುವ ರಾಸಾಯನಿಕ ವಸ್ತುಗಳನ್ನು ಸಾಗಿಸುತ್ತಿದ್ದ ಹಡಗು ಚೀನಾದೊಂದಿಗಿನ ಸಂಬಂಧ ಹೊಂದಿದೆ ಎಂಬ ಆರೋಪಗಳನ್ನು ಬೀಜಿಂಗ್ ಸಂಪೂರ್ಣವಾಗಿ ತಳ್ಳಿಹಾಕಿದೆ.

ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಗುವೊ ಜಿಯಾಕುನ್ ಈ ಕುರಿತು ಪ್ರತಿಕ್ರಿಯಿಸಿ, ಅದು ವಿದೇಶಿ ಧ್ವಜ ಹೊಂದಿರುವ ಕಂಟೇನರ್ ಹಡಗು ಮಾತ್ರವಾಗಿದ್ದು, ಚೀನಾದೊಂದಿಗೆ ಯಾವುದೇ ಸಂಪರ್ಕ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಯಾವುದೇ ಆಧಾರವಿಲ್ಲದೆ ಚೀನಾವನ್ನು ಈ ಪ್ರಕರಣಕ್ಕೆ ಸಂಪರ್ಕಿಸುವುದು ತಪ್ಪು ಮತ್ತು ಅಪ್ರಚಾರ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:

ಇನ್ನೊಂದೆಡೆ, ಅಮೆರಿಕ ರಾಜಕೀಯ ವಲಯದಿಂದ ಈ ಪ್ರಕರಣಕ್ಕೆ ಭಿನ್ನವಾದ ಹೇಳಿಕೆಗಳು ಕೇಳಿಬಂದಿವೆ. ನಿಕ್ಕಿ ಹ್ಯಾಲಿ ಹಡಗು ಚೀನಾದಿಂದ ಇರಾನ್‌ಗೆ ತೆರಳುತ್ತಿತ್ತು ಮತ್ತು ಕ್ಷಿಪಣಿ ತಯಾರಿಕೆಗೆ ಬಳಸುವ ರಾಸಾಯನಿಕಗಳನ್ನು ಸಾಗಿಸುತ್ತಿತ್ತು ಎಂದು ಆರೋಪಿಸಿದ್ದಾರೆ. ಅಮೆರಿಕ ಪಡೆ ನೀಡಿದ ನಿಲ್ಲುವ ಸೂಚನೆಯನ್ನು ಹಡಗು ನಿರಾಕರಿಸಿತು ಎಂಬುದನ್ನೂ ಅವರು ಉಲ್ಲೇಖಿಸಿದ್ದಾರೆ.

ಈ ಬೆಳವಣಿಗೆಯ ನಡುವೆ, ಡೊನಾಲ್ಡ್ ಟ್ರಂಪ್ ಚೀನಾದ ಮೇಲೆ ಸುಂಕ ವಿಧಿಸುವ ಎಚ್ಚರಿಕೆ ನೀಡಿರುವ ವಿಚಾರಕ್ಕೂ ಚೀನಾ ತಿರುಗೇಟು ನೀಡಿದೆ. ಆರೋಪಗಳ ಆಧಾರದಲ್ಲಿ ಯಾವುದೇ ಕ್ರಮ ಕೈಗೊಂಡರೆ, ಚೀನಾ ಕೂಡ ಪ್ರತಿಕ್ರಿಯೆ ನೀಡಲಿದೆ ಎಂದು ಗುವೊ ತಿಳಿಸಿದ್ದಾರೆ.

Must Read