June 18, 2026
Thursday, June 18, 2026
spot_img

ರಾಯಚೂರಿನಲ್ಲಿ ಸಿಡಿಲು ಬಡಿದು ಮಹಿಳೆ ಸಾ*ವು, ತೆಂಗಿನ ಮರಕ್ಕೆ ಬೆಂಕಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಕೆಂಡದಂತಹ ಬಿಸಿಲಿದೆ ಆದರೆ ಹಲವು ಜಿಲ್ಲೆಗಳಲ್ಲಿ ಮಾತ್ರ ಗುಡುಗು, ಸಿಡಿಲು ಸಹಿತ ಜೋರು ಮಳೆ ಬೀಳುತ್ತಿದ್ದು, ರಾಯಚೂರಿನಲ್ಲಿ ರೈತ ಮಹಿಳೆಯೊಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ.

ಲಿಂಗಸೂಗೂರು ತಾಲೂಕಿನ ಯರಜಂತಿ ಬಳಿಯ ಬಸವನ ಬಗಡಿ ದೊಡ್ಡಿಯಲ್ಲಿ ಜೋರು ಸಿಡಿಲು ಬಂದಿದ್ದು, 40 ವರ್ಷದ ದುರುಗಮ್ಮ ಮೃತಪಟ್ಟಿದ್ದಾರೆ.

ಮಳೆ ಜೋರಾಗಿದೆ, ಹುಲ್ಲಿನ ಬಣವೆ ಒದ್ದೆಯಾಗಿ ಬಿಡುತ್ತದೆ ಎಂದು ದುರುಗಮ್ಮ ತಲೆ ಮೇಲೆ ಕೈ ಹಿಡಿದುಕೊಂಡು ಓಡಿದ್ದಾರೆ. ನಂತರ ಬಣವೆಗೆ ಟಾರ್ಪಲ್‌ ಹೊದಿಸಲು ಆರಂಭಿಸಿದ್ದಾರೆ. ಈ ವೇಳೆ ಸಿಡಿಲು ಬಡಿದಿದೆ. ಒಂದೇ ಕ್ಷಣದಲ್ಲು ದುರುಗಮ್ಮ ಉಸಿರು ಚೆಲ್ಲಿದ್ದಾರೆ.

ಇನ್ನು ಮಾನ್ವಿ ತಾಲೂಕಿನ ಹಿರೇದಿನ್ನಿ ಗ್ರಾಮದಲ್ಲಿ ಸಿಡಿಲು ಬಡಿದು ತೆಂಗಿನ ಮರ ಹೊತ್ತಿ ಉರಿದಿದೆ. ಇಡೀ ಮರಕ್ಕೆ ಬೆಂಕಿ ತಗುಲಿದ್ದು, ಧಗಧಗನೆ ಉರಿದಿದೆ. ಇದನ್ನು ಕಂಡು ಜನ ಹೆದರಿದ್ದಾರೆ. ರಾಯಚೂರು ಹಾಗೂ ನಾರ್ಥ್‌ನಲ್ಲಿ ಭಾರೀ ಬಿಸಿಲಿದ್ದು, ಮಳೆಯ ಸಿಂಚನಕ್ಕೆ ಜನ ಖುಷಿಯಾಗುತ್ತಿದ್ದರು. ಅಷ್ಟರಲ್ಲೇ ಮಳೆ ಅತಿಯಾಗಿ ಸಿಡಿಲು, ಗುಡುಗಿನ ಅಬ್ಬರಕ್ಕೆ ಜನರು ಬಾಗಿಲು ಹಾಕಿಕೊಂಡು ಮನೆಯೊಳಕ್ಕೆ ಹೋಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !