July 12, 2026
Sunday, July 12, 2026
spot_img

HEALTH | ಬಿಸಿಲಿನ ಝಳ ತಾಳಲಾರದೆ ಕೆಳಕ್ಕೆ ಬಿದ್ದವರಿಗೆ ಫಸ್ಟ್‌ ಏಯ್ಡ್‌ ಮಾಡೋದು ಹೇಗೆ?

ಬಿಸಿಲಿನ ಝಳವನ್ನು ತಾಳಲಾರದೇ ನಿಮ್ಮ ಸುತ್ತಮುತ್ತ ಯಾರಾದರೂ ಕುಸಿದುಬಿದ್ದರೆ ಮೊದಲು ಏನು ಮಾಡ್ತೀರಿ? ಫೋಟೊ ತೆಗೆದು ಅಪ್‌ಲೋಡ್‌ ಮಾಡ್ತೀರಾ?

ಖಂಡಿತಾ ಬೇಡ, ಅವರನ್ನು ಉಳಿಸಲು ನಿಮ್ಮ ಕೈಲಾದ ಪ್ರಯತ್ನ ಮಾಡಿ. ಇನ್ಯಾವುದೋ ದಿನ ನಿಮಗೆ ಸಮಸ್ಯೆಯಾದಾಗ ಯಾರಾದರೂ ಸಹಾಯ ಮಾಡುತ್ತಾರೆ.

ಟಿಪ್ಸ್‌ ಹೀಗಿದೆ..

ಮೊದಲು ಆ ವ್ಯಕ್ತಿಯನ್ನು ನೆರಳಿರುವ, ತಣ್ಣಿಗಿನ ಜಾಗಕ್ಕೆ ಕರೆದುಕೊಂಡು ಬನ್ನಿ. ಮನೆಯಲ್ಲಿಯೇ ಬಿದ್ದರೆ ಫ್ಯಾನ್‌ ತಂದು ಅವರ ದೇಹದ ಬಳಿ ಇಟ್ಟು ಫುಲ್‌ ಸ್ಪೀಡ್‌ ನೀಡಿ

ಹೊರಗಡೆ ಎಲ್ಲಾದರೂ ಇದ್ದರೆ ನಿಮ್ಮ ಬಳಿ ಸಣ್ಣ ಫ್ಯಾನ್‌ ಇದ್ದರೆ ಬಳಸಿ, ಪುಸ್ತಕ, ಪೇಪರ್‌ ಏನು ಸಿಗುತ್ತದೋ ಅದರಿಂದ ಗಾಳಿ ಬೀಸಿ.

ತಣ್ಣಗಿನ ನೀರಿನಲ್ಲಿ ಅದ್ದಿದ ಬಟ್ಟೆಯನ್ನು ಅವರ ಮೈಗೆ ಸವರಿ, ಅವರ ದೇಹ ಅತಿಯಾಗಿ ಬಿಸಿಯಾಗಿದೆ. ಅದು ತಣ್ಣಗಾಗಬೇಕು. ಅದಕ್ಕಾಗಿ ನೀವು ತಣ್ಣೀರಿನ ಪ್ಯಾಕ್ಸ್‌ ನೀಡಿ.

ಸ್ವಲ್ಪ ಎಚ್ಚರವಾಗಿದ್ದರೆ ಅವರಿಗೆ ತಣ್ಣೀರು, ಜ್ಯೂಸ್‌ ಇನ್ನಿತರ ಲಿಕ್ವಿಡ್‌ ಐಟಂ ನೀಡಿ.

ಅವರ ಕಾಲನ್ನು ಎತ್ತಿ ಅದರ ಹಿಂದೆ ಸಪೋರ್ಟ್‌ಗೆ ಏನಾದರೂ ನೀಡಿ. ನಿಮ್ಮ ಬ್ಯಾಗ್‌, ಇಟ್ಟಿಗೆ, ದಿಂಬು, ಏನು ಸಿಗುತ್ತದೋ ಅದರ ಮೇಲೆ ಅವರ ಕಾಲನ್ನು ಇರಿಸಿ.

ಇದೆಲ್ಲಾ ಮಾಡುವ ಮುನ್ನವೇ ಒಂದು ಬಾರಿ ಎಮರ್ಜೆನ್ಸಿಗೆ ಕರೆ ಮಾಡಿ. ಆಂಬುಲೆನ್ಸ್‌ ಕರೆಸಿ.

ಅವರ ಮುಖವನ್ನು ಮೇಲೆತ್ತಿ. ಅವರ ಉಸಿರಾಟ ಗಮನಿಸಿ. ಉಸಿರಾಟದಲ್ಲಿ ಸ್ವಲ್ಪ ಏರುಪೇರು ಎನಿಸಿದರೆ ಸಿಪಿಆರ್‌ ಮಾಡಿ.

ಬಿಗಿಯಾದ ಬಟ್ಟೆಗಳನ್ನು ಅವರು ಹಾಕಿದ್ದರೆ ಅದನ್ನು ಸಡಿಲ ಮಾಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !