ಈ ಒಂಬತ್ತು ಲಕ್ಷಣಗಳು ನಿಮ್ಮಲ್ಲಿದ್ರೆ ನೀವು ಆಕರ್ಷಕ ಮಹಿಳೆಯಂತೆ! ಈ ವಿಷಯ ತುಂಬಾ ಸಿಂಪಲ್ ಎನಿಸಬಹುದು. ಆದರೆ ಕೆಲವೊಮ್ಮೆ ನಿಮಗೆ ಅರ್ಥವೇ ಆಗದಂತಹ ಘಟನೆಗಳು ನಡೆಯುತ್ತವೆ. ಅದಕ್ಕೆ ಉತ್ತರವೇ ಇರೋದಿಲ್ಲ. ಆದರೆ ಈ ಒಂಬತ್ತು ವಿಷಯಗಳತ್ತ ಗಮನಹರಿಸಿ ನೋಡಿ. ನಿಮಗೆ ಉತ್ತರ ಸಿಕ್ಕರೂ ಸಿಗಬಹುದು..
ಗುಂಪಿಗೆ ನೀವು ಎಂಟ್ರಿ ಕೊಡುವ ಮುನ್ನ ಒಂದು ಹೇಳಲಾಗದ ನಿಶ್ಯಬ್ಧವಿರುತ್ತದೆ. ಜನರು ನಿಮ್ಮನ್ನೊಮ್ಮೆ ಗಮನಿಸಿಯೇ ಗಮನಿಸುತ್ತಾರೆ.
ನಿಮ್ಮ ಎನರ್ಜಿ ಸ್ಟ್ರಾಂಗ್ ಆಗಿ ಇದೆ ಎಂತಾದರೆ ನಿಮ್ಮನ್ನು ಮೊದಲ ಬಾರಿಗೆ ಭೇಟಿ ಮಾಡುವ ಜನ ಮಾತನಾಡುವಾಗ ಎಡವುತ್ತಾರೆ. ನಿಮ್ಮಿಂದ ಅವರಿಗೆ ಇನ್ಸೆಕ್ಯುರ್ ಫೀಲಿಂಗ್ ಬರುತ್ತದೆ.
ಜನ ನಿಮ್ಮಷ್ಟು ಇಷ್ಟವೇಪಡೋದಿಲ್ಲ ಎಂದು ಎದುರಿಗೇ ಹೇಳಬಹುದು. ಆದರೆ ಅವರು ಸದಾ ನಿಮ್ಮ ಬಗ್ಗೆಯೇ ಆಲೋಚಿಸುತ್ತಾರೆ. ನಿಮ್ಮ ಪ್ರೆಸೆನ್ಸ್ ಎಷ್ಟೋ ಜನರ ಜೀವನಕ್ಕೆ ಅತ್ಯಾವಶ್ಯಕ.
ಸಣ್ಣ ಪುಟ್ಟ ಮೇಲೆ ಮೇಲೆ ಮಾತುಗಳು ನಿಮಗೆ ಇಷ್ಟವಾಗೋದಿಲ್ಲ. ಏನಿದ್ದರೂ ಅಂತರಾಳದ ಮಾತುಗಳು ಮಾತ್ರ. ಡೀಪ್ ಕಾನ್ವರ್ಸೇಷನ್ ಇದ್ದರೆ ಮಾತ್ರ ನೀವು ಜನರನ್ನು ಇಷ್ಟಪಡ್ತೀರಿ.
ನೀವು ನೈಸರ್ಗಿಕವಾಗಿಯೇ ಖಾಸಗಿ ವ್ಯಕ್ತಿ. ನಿಮ್ಮ ಜೀವನದ ಎಲ್ಲ ವಿಷಯಗಳು ಯಾರಿಗೂ ತಿಳಿದಿರೋದಿಲ್ಲ. ನೀವು ನಿಗೂಢ ವ್ಯಕ್ತಿಯಂತೆ ಕಾಣ್ತೀರಿ. ಅದಕ್ಕೆ ಜನ ನಿಮ್ಮಿಂದ ಆಕರ್ಷಿತರಾಗ್ತಾರೆ.
ಜನರ ಉದ್ದೇಶ, ಜನರ ಎನರ್ಜಿ ಎಂಥದ್ದು ಅನ್ನೋದನ್ನು ನೀವು ಸುಲಭವಾಗಿ ಗುರುತಿಸ್ತೀರಿ. ನಿಮ್ಮನ್ನು ಮೋಸ ಮಾಡೋಕೆ ಆಗೋದಿಲ್ಲ.
ನಿಮ್ಮ ಜೊತೆ ಮಾತನಾಡಿದ ಹಲವು ವ್ಯಕ್ತಿಗಳು ನಿಮ್ಮನ್ನು ಕಂಡೆ ಹೊಟ್ಟೆಕಿಚ್ಚು ಪಡುತ್ತಾರೆ. ಅವರ ಜೀವನವನ್ನು ನಿಮ್ಮ ಜೀವನದ ಜೊತೆ ಕಂಪೇರ್ ಮಾಡ್ತಾರೆ.
ನೀವು ಹಣಕ್ಕಾಗಿ ಎಲ್ಲಿಗೂ ಹೋಗೋದಿಲ್ಲ. ನೀವು ಮಾಡುವ ಕೆಲಸದಿಂದ ನಿಮಗೆ ಬೇಕಾದಷ್ಟು ಹಣ ಸಿಗುತ್ತದೆ.ಒಳ್ಳೊಳ್ಳೆ ಕೆಲಸಗಳು ನಿಮ್ಮನ್ನೇ ಹುಡುಕಿ ಬರುತ್ತವೆ.
ನೀವು ಏನನ್ನೂ ಪ್ರೂವ್ ಮಾಡಬೇಕಾದ ಅವಶ್ಯಕತೆ ಇಲ್ಲ. ನಿಮ್ಮ ನಿಶ್ಯಬ್ದವೇ ಎಲ್ಲದಕ್ಕೂ ಉತ್ತರವಾಗುತ್ತದೆ



