June 15, 2026
Monday, June 15, 2026
spot_img

ʼಸ್ಟಾರ್‌ʼ ಸದ್ದಿಲ್ಲದಂತೆ ಮತದಾನ ಮಾಡಿದ ಸೂಪರ್‌ ಸ್ಟಾರ್‌ ರಜನೀಕಾಂತ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಂದು ತಮಿಳುನಾಡು ಹಾಗೂ ಪಶ್ಮಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಸೂಪರ್‌ ಸ್ಟಾರ್‌ ರಜನೀಕಾಂತ್‌ ಮತ ಚಲಾವಣೆ ಮಾಡಿದ್ದಾರೆ.

ಸಾಮಾನ್ಯರಂತೆ ಚೆನ್ನೈನ ಸ್ಟೆಲ್ಲಾ ಮೇರಿ ಶಾಲೆಯಲ್ಲಿರುವ ಮತಗಟ್ಟೆಗೆ ಬಂದು ವೋಟ್‌ ಮಾಡಿದ್ದಾರೆ. ಜನರ ಜೊತೆ ಅಥವಾ ಇನ್ಯಾರ ಜೊತೆಯಾಗಲಿ ಬಾರದೇ ಒಬ್ಬರೇ ಬಂದು ಸಿಂಪಲ್‌ ಆಗಿ ವೋಟ್‌ ಮಾಡಿದ್ದಾರೆ. ಅದಾದ ನಂತರ ಮಾಧ್ಯಮಗಳಿಗೆ ಇಂಕ್‌ ಹಚ್ಚಿದ ತಮ್ಮ ಬೆರಳುಗಳನ್ನು ತೋರಿಸಿದ್ದಾರೆ.

ತಮಿಳುನಾಡಿನ ಎಲ್ಲಾ 234 ವಿಧಾನಸಭಾ ಸ್ಥಾನಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ತಮಿಳುನಾಡಿನಲ್ಲಿ ಸ್ಟಾಲಿನ್‌ ಹಾಗೂ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ತಮ್ಮ ಭದ್ರಕೋಟೆಗಳನ್ನು ಉಳಿಸಿಕೊಳ್ತಾರಾ ಎಂದು ಕಾದುನೋಡಬೇಕಿದೆ. ಇನ್ನು ಇದೇ ಮೊದಲ ಬಾರಿಗೆ ತಮಿಳು ನಟ ದಳಪತಿ ವಿಜಯ್‌ ಟಿವಿಕೆ ಪಕ್ಷವನ್ನು ಕಟ್ಟಿ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !