ಇಂದು ನಮ್ಮ ನಿರ್ಧಾರಗಳಲ್ಲಿ ಎಷ್ಟು ನಮ್ಮತನವಿದೆ? ನಾವು ಆಯ್ಕೆ ಮಾಡೋದು ಕೆಲಸವಾಗಲಿ, ಸ್ಟೈಲ್ ಆಗಲಿ, ಗುರಿಗಳಾಗಲಿ ಅದರ ಹಿಂದೆ ನಮ್ಮ ಇಷ್ಟವೇ ಇದೆಯಾ, ಇಲ್ಲಾ ‘ಇತರರು ಹೇಗೆ ಮಾಡ್ತಿದ್ದಾರೆ’ ಅನ್ನೋ ಪ್ರಭಾವವೇ ಹೆಚ್ಚಾ?
ನಿಧಾನವಾಗಿ ಹೋಲಿಕೆ ನಮ್ಮ ಜೀವನದ ಭಾಗವಾಗಿಬಿಟ್ಟಿದೆ. ನೇರವಾಗಿ ಹೋಲಿಸುತ್ತಿಲ್ಲ ಅನ್ನಿಸಿದರೂ, ನಮ್ಮ ಆಯ್ಕೆಗಳ ಮೇಲೆ ಅದರ ಪರಿಣಾಮ ಇರುತ್ತದೆ. ಯಾರೋ ಸಾಧಿಸಿದ್ದು ನೋಡಿದ ಮೇಲೆ ನಮಗೂ ಅದೇ ಬೇಕು ಅನ್ನಿಸಬಹುದು. ಆದರೆ ಅದು ನಮ್ಮ ನಿಜವಾದ ಬಯಕೆಯೇ ಅಥವಾ ಕೇವಲ ಪ್ರಭಾವವೋ ಅನ್ನೋದನ್ನ ನಾವು ಕೇಳಿಕೊಳ್ಳುವುದೇ ಇಲ್ಲ.
ಇದನ್ನೂ ಓದಿ:
ಈ ರೀತಿಯಾಗಿ ಬದುಕುತ್ತಾ ಹೋದರೆ, ನಾವು ನಮ್ಮದೇ ಜೀವನದಿಂದ ಸ್ವಲ್ಪ ದೂರವಾಗುತ್ತೇವೆ. ಹೊರಗೆ ನೋಡಿದ್ರೆ ಎಲ್ಲವೂ ಸರಿಯಾಗಿರಬಹುದು ಆದರೆ ಒಳಗೆ ಒಂದು ಪ್ರಶ್ನೆ ಇರುತ್ತದೆ: “ನಾನು ನಿಜವಾಗಿಯೂ ಇದನ್ನೇ ಬಯಸಿದ್ದೆನಾ?” ಅನ್ನೋದು.
ನಿಜವಾದ ಸಂತೋಷ ಅಂದ್ರೆ ಇತರರಂತೆ ಬದುಕುವುದಲ್ಲ, ನಮಿಗೆ ಸರಿಯಾದ ದಾರಿಯಲ್ಲಿ ನಡೆಯುವುದು. ಅದು ನಿಧಾನವಾಗಿರಬಹುದು, ಸಣ್ಣದಾಗಿರಬಹುದು, ಆದರೆ ಅದು ನಮ್ಮದೇ ಆಗಿರುತ್ತದೆ.
ಹೀಗಾಗಿ ಕೆಲವೊಮ್ಮೆ ನಾವು ಮಾಡುತ್ತಿರುವುದನ್ನೇ ನಿಲ್ಲಿಸಿ ಕೇಳಿಕೊಳ್ಳಬೇಕು
ನಾನು ನನ್ನ ಜೀವನವನ್ನು ರೂಪಿಸುತ್ತಿದ್ದೀನಿ…
ಇಲ್ಲಾ ಯಾರದೋ ಜೀವನವನ್ನು ಕಾಪಿ ಮಾಡ್ತಿದ್ದೀನಾ?
ಉತ್ತರ ಸಿಕ್ಕಾಗ, ದಾರಿ ಸ್ವತಃ ಸ್ಪಷ್ಟವಾಗುತ್ತದೆ.



