October 8, 2026
Thursday, October 8, 2026
spot_img

SKIN CARE | ಇಂಥ ಕೆಟ್ಟ ಬಿಸಿಲಿನಲ್ಲಿಯೂ ಹಲವರ ಮುಖ ಚಂದ್ರನಂತೆ ಹೊಳೆಯೋದು ಹೇಗೆ? ಸ್ಕಿನ್‌ ಕೇರ್‌ ಶುರು ಮಾಡಿ

ನಮಗಿರುವ ಬಿಸಿಲೇ ತಾನೇ ಅವರಿಗೂ ಇರೋದು? ಅವರ ಮುಖ ಯಾಕೆ ಅಷ್ಟೊಂದು ಹೊಳೆಯುತ್ತದೆ? ನಮ್ಮ ಮುಖ ಮಾತ್ರ ಟ್ಯಾನ್‌ ಆಗುತ್ತದೆ? ಮೊಡವೆ ಕಲೆಗಳು, ಪಿಗ್ಮೆಂಟೇಷನ್‌ ಇನ್ನಿತರ ಸಮಸ್ಯೆಗಳಿವೆ..

ನೀವು ಕೂಡ ಇತರರನ್ನು ನೋಡಿ ಹೀಗೆಲ್ಲಾ ಅಂದುಕೋತೀರಾ? ನೀವು ನಿಮ್ಮ ಮುಖವನ್ನು ಅವರಂತೆಯೇ ಮಾಡ್ಕೋಬೋದು ಅದಕ್ಕೆ ತಕ್ಕಂತಹ ಸ್ಕಿನ್‌ ಕೇರ್‌ ಮಾಡಬೇಕಷ್ಟೆ.

ನಿತ್ಯ ರಾತ್ರಿ ಮೇಕಪ್‌ ತೊಳೆದು ಮಲಗಿ, ಮೇಕಪ್‌ ಅಂದ್ರೆ ಬರೀ ಮೇಕಪ್‌ ಅಂತ ಅಷ್ಟೇ ಅಲ್ಲ. ಸನ್‌ಸ್ಕ್ರೀನ್‌ ಇದ್ದರೂ ಅದನ್ನು ತೊಳೆದು ಮಲಗಿ.

ವಾರದಲ್ಲಿ ಮೂರು ದಿನ ಟ್ರೆಟಿನಾಲ್‌ ಅಥವಾ ರೆಟಿನಾಲ್‌ ಬಳಸಿ. ನಿಮ್ಮ ಮುಖಕ್ಕೆ ಹೊಂದುವುದನ್ನು ವೈದ್ಯರಿಂದ ತಿಳಿದುಕೊಳ್ಳಿ.

ಮನೆಯಲ್ಲಿ ಸಿಗುವ ಯಾವುದೇ ಹಣ್ಣಿನ ಸಿಪ್ಪೆಯ ಫೇಸ್‌ಪ್ಯಾಕ್‌ ಮಾಡಿಕೊಳ್ಳಿ. ಆಗಾಗ ಐಸ್‌ಕ್ಯೂಬ್‌ನಿಂದ ಮುಖಕ್ಕೆ ಮಸಾಜ್‌ ಮಾಡಿ.

ಮುಖ ತೊಳೆದ ತಕ್ಷಣವೇ ಮಾಯಿಶ್ಚರೈಸ್‌ ಮಾಡಿ. ಮಾಯಿಶ್ಚರೈಸ್‌ ಇಲ್ಲದ ಮುಖ ಡ್ರೈ ಆಗುತ್ತದೆ.

ಮೊಸರು, ಅಲೋವೆರಾ, ಕಡ್ಲೆಹಿಟ್ಟು, ಅಕ್ಕಿಹಿಟ್ಟು ಇನ್ನಿತರ ವಸ್ತುಗಳ ಫೇಸ್‌ಪ್ಯಾಕ್‌, ವಾರಕ್ಕೊಮ್ಮೆ ಸ್ಕ್ರಬ್‌ ಮಾಡಿ

ಸ್ಕಿನ್‌ ಫ್ರೆಂಡ್ಲಿ ಮೇಕಪ್‌ ಬಳಸಿ. ಮೇಕಪ್‌ ತೆಗೆದು ಮಲಗಿ.

ಏನೇ ಹೊರಗಿನಿಂದ ಮಾಡಿದ್ರೂ ದೇಹಕ್ಕೆ ಏನು ಕೊಡ್ತೀರಿ ಅನ್ನೋದು ಮುಖ್ಯ. ಊಟ, ನೀರು, ಹಸಿರು ತರಕಾರಿ ಅತ್ಯವಶ್ಯ

Must Read