April 27, 2026
Monday, April 27, 2026
spot_img

LIFE | ‘ವರ್ಕ್ ಹಾರ್ಡ್’ ಮಧ್ಯೆ ‘Live Well’ ಅನ್ನೋದನ್ನ ನಾವು ಮರೆತುಬಿಟ್ಟಿದ್ದೀವಾ?

ಇಂದಿನ ಜೀವನದಲ್ಲಿ ‘ಬ್ಯುಸಿ’ ಅನ್ನೋದು ಒಂದು ಪದ ಅಲ್ಲ… ಅದು ಸ್ಟೇಟಸ್ ಆಗಿಬಿಟ್ಟಿದೆ. ದಿನವಿಡೀ ಕೆಲಸ, ಗುರಿಗಳ ಹಿಂದೆ ಓಟ, ಮುಂದಿನ ಸಾಧನೆಗಾಗಿ ನಿರಂತರ ಹೋರಾಟ ಇದನ್ನೇ ಯಶಸ್ಸಿನ ಅಳತೆ ಎಂದು ನೋಡಲಾಗುತ್ತಿದೆ. ವರ್ಕ್ ಹಾರ್ಡ್ ಅನ್ನೋ ಮಂತ್ರ ಎಲ್ಲರ ಬದುಕಿನ ಭಾಗವಾಗಿದೆ. ಆದರೆ ಈ ಓಟದಲ್ಲಿ ಒಂದು ಸಣ್ಣ ಪ್ರಶ್ನೆ ಕೇಳಿಕೊಳ್ಳೋ ಸಮಯವೇ ನಮಗೆ ಸಿಗ್ತಿಲ್ಲ ನಾವು ನಿಜವಾಗಿಯೂ ಚೆನ್ನಾಗಿ ಬದುಕುತ್ತಿದ್ದೇವಾ?

ಹೆಚ್ಚು ಸಂಪಾದನೆ, ದೊಡ್ಡ ಸಾಧನೆ, ಒಳ್ಳೆಯ ಸ್ಥಾನ ಇವೆಲ್ಲಾ ಮುಖ್ಯ. ಆದರೆ ಅದಕ್ಕಾಗಿ ಮನಸ್ಸಿನ ಶಾಂತಿ, ಆರೋಗ್ಯ, ನೆಮ್ಮದಿ, ಸಣ್ಣ ಸಂತೋಷಗಳನ್ನು ಕಳೆದುಕೊಂಡರೆ ಅದಕ್ಕೆ ಅರ್ಥವೇನು? ಕೆಲವೊಮ್ಮೆ ನಾವು ಜೀವನ ಕಟ್ಟೋಕೆ ಇಷ್ಟು ಬ್ಯುಸಿ ಆಗ್ತೀವಿ, ಅದನ್ನೇ ಅನುಭವಿಸೋದು ಮರೆತುಬಿಡುತ್ತೇವೆ. ದಿನಗಳು ಸಾಗುತ್ತವೆ, ಗುರಿಗಳು ಬದಲಾಗುತ್ತವೆ, ಆದರೆ ಒಳಗಿನ ಖಾಲಿತನ ಹಾಗೇ ಉಳಿಯುತ್ತದೆ.

ಇದನ್ನೂ ಓದಿ:

‘ಲೀವ್ ವೆಲ್’ ಅಂದ್ರೆ ದೊಡ್ಡ ಲಕ್ಸುರಿ ಅಲ್ಲ. ಸಮಯಕ್ಕೆ ಊಟ ಮಾಡೋದು, ಮನಸ್ಸಿಗೆ ಇಷ್ಟವಾದ ಕೆಲಸಕ್ಕೆ ಸ್ವಲ್ಪ ಸಮಯ ಕೊಡೋದು, ನೆಮ್ಮದಿಯಾಗಿ ನಿದ್ರೆ ಮಾಡೋದು, ತಲೆ ತುಂಬಾ ಭಾರವಾಗಿದ್ದಾಗ ಒಂದು ವಿರಾಮ ತೆಗೆದುಕೊಳ್ಳೋದು ಇವೆಲ್ಲವೂ ಬದುಕಿನ ಗುಣಮಟ್ಟವನ್ನು ನಿರ್ಧರಿಸುವ ಸಣ್ಣ ಸಂಗತಿಗಳು. ಆದರೆ ಇವುಗಳನ್ನೇ ನಾವು ನಂತರ ನೋಡೋಣ ಅಂತ ಮುಂದೂಡುತ್ತಾ ಹೋಗುತ್ತೇವೆ.

ಕೆಲಸ ಮಾಡೋದು ಅಗತ್ಯ. ಕನಸುಗಳಿಗಾಗಿ ಶ್ರಮಿಸೋದು ಮುಖ್ಯ. ಆದರೆ ಬದುಕೋದೇ ಮರೆತು ಕೆಲಸ ಮಾಡೋದು ಕೊನೆಗೆ ನಮ್ಮನ್ನು ದಣಿವಿನ ಬದುಕಿಗೆ ತಳ್ಳಬಹುದು. ಯಶಸ್ಸಿನ ಜೊತೆ ನೆಮ್ಮದಿಯೂ ಬೇಕು, ಸಾಧನೆಯ ಜೊತೆ ಸಂತೋಷವೂ ಬೇಕು. ಯಾಕೆಂದರೆ ಜೀವನ ಕೇವಲ ಹಾರ್ಡ್ ವರ್ಕ್ ಗೆ ಮಾತ್ರ ಅಲ್ಲ… ಅದನ್ನು well ಆಗಿ ಬದುಕೋಕೆ ಕೂಡ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !