September 14, 2026
Monday, September 14, 2026
spot_img

MANNERS | ಆಫೀಸ್‌ನಲ್ಲಿ ಈ ರೀತಿ ನಡೆದುಕೊಳ್ಳಬೇಡಿ, ಇದು ಪ್ರೊಫೆಷನಲ್‌ ಬಿಹೇವಿಯರ್‌ ಅಲ್ಲ!

ಬರೀ ಓದಿ ಕೆಲಸ ಗಿಟ್ಟಿಸಿಕೊಳ್ಳುವ ಕಲೆ ಇದ್ದರೆ ಸಾಲದು, ಕೆಲಸ ಸಿಕ್ಕಮೇಲೆ ಅದನ್ನು ಉಳಿಸಿಕೊಳ್ಳುವ ಸಾಮರ್ಥ್ಯ ಕೂಡ ಇರಬೇಕು. ನೀವು ಎಂಥದ್ದೇ ಒಳ್ಳೆಯ ಕೆಲಸಗಾರರಾದರೂ ನಿಮ್ಮ ಬಿಹೇವಿಯರ್‌ ಚೆನ್ನಾಗಿಲ್ಲ ಎಂದಾದರೆ ಯಾರೂ ನಿಮ್ಮನ್ನು ಹತ್ತಿರ ಇಟ್ಟುಕೊಳ್ಳಲಾರರು.

ಯಾವ ಬಿಹೇವಿಯರ್‌ ಪ್ರೊಫೆಷನಲ್‌ ಅಲ್ಲ ಎನಿಸುತ್ತದೆ?

ಆಫೀಸ್‌ನಲ್ಲಿ ನಿಮ್ಮ ಕಲೀಗ್‌ಗಳ ಜೊತೆ ಗೌರವ ಇಲ್ಲದಂತೆ ಮಾತನಾಡುವುದು, ದೇಹದ ಬಗ್ಗೆ ಕಮೆಂಟ್‌ ಮಾಡುವುದು, ಕೆಟ್ಟ ಭಾಷೆ ಬಳಕೆ ಮಾಡುವುದು, ಸಿಟ್ಟಿನಲ್ಲಿ ವರ್ತಿಸುವುದು.

ಬೇರೆಯವರಿಗೆ ಬ್ಲಾಕ್‌ಮೇಲ್‌ ಮಾಡುವುದು, ಜಾತಿ, ಭಾಷೆ ಬಗ್ಗೆ ಅಣಕ ಮಾಡುವುದು, ಲೈಂಗಿಕ ಕಿರುಕುಳ ನೀಡುವುದು.

ಸರಿಯಾದ ಬಟ್ಟೆ ಧರಿಸದೇ ಓಡಾಡುವುದು, ಉತ್ತಮ ರೀತಿಯಲ್ಲಿ ತಮ್ಮನ್ನು ತಾವು ಗ್ರೂಮ್‌ ಮಾಡಿಕೊಳ್ಳದೇ ಇರುವುದು.

ಸುಳ್ಳು ಹೇಳುವುದು, ಬೇರೆಯವರ ಕೆಲಸಕ್ಕೆ ಕ್ರೆಡಿಟ್‌ ತೆಗೆದುಕೊಳ್ಳುವುದು, ಜವಾಬ್ದಾರಿ ಪೂರ್ಣಗೊಳಿಸುವಲ್ಲಿ ವಿಫಲವಾಗುವುದು.

ದಿನವೂ ಲೇಟಾಗಿ ಬರೋದು, ಟೈಮ್‌ ಪಾಸ್‌ ಮಾಡೋದು, ಡೆಡ್‌ಲೈನ್ಸ್‌ ಮಿಸ್‌ ಮಾಡೋದು, ಕಾಫಿ, ತಿಂಡಿ, ಊಟದಲ್ಲೇ ಅತೀ ಹೆಚ್ಚು ಸಮಯ ಕಳೆಯೋದು.

ಬೇರೆಯವರ ಬಗ್ಗೆ ರೂಮರ್ಸ್‌ ಹರಡಿಸೋದು, ಗಾಸಿಪ್‌ ಮಾಡೋದು, ನೆಗೆಟಿವಿಟಿ ಹರಡೋದು ಮಾಡುವಂತಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !