April 29, 2026
Wednesday, April 29, 2026
spot_img

ಪೂಜಾ ದತ್ತ ಮರ್ಡರ್‌? ಮೂರು ತಿಂಗಳಿನಿಂದ ಯಾರನ್ನೂ ಭೇಟಿ ಆಗಿರಲಿಲ್ಲವಂತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ಆಡುಗೋಡಿಯ ಮನೆಯಲ್ಲಿ ಜಾರ್ಖಂಡ್‌ ಮೂಲದ ಯುವತಿಯ ಮೃತದೇಹ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿತ್ತು.ಪೊಲೀಸರು ತನಿಖೆ ಚುರುಕು ಮಾಡಿದ್ದು, ಇನ್ನಷ್ಟು ಮಾಹಿತಿ ಹೊರಬಿದ್ದಿದೆ.

ಜಾರ್ಖಂಡ್‌ನಿಂದ ಕೆಲಸಕ್ಕೆಂದು ಬೆಂಗಳೂರಿಗೆ ಬಂದಿದ್ದ ಪೂಜಾ ದತ್ತ ಮೂರು ವರ್ಷ ಸಾಫ್ಟ್‌ವೇರ್‌ ಕಂಪನಿಯೊಂದರಲ್ಲಿ ಉದ್ಯೋಗ ಮಾಡಿದ್ದಾರೆ. ಒಂದು ವರ್ಷದ ಹಿಂದಷ್ಟೇ ಕೆಲಸಕ್ಕೆ ರಾಜೀನಾಮೆ ನೀಡಿದ್ದರು ಎಂದು ತಿಳಿದುಬಂದಿದೆ.

ರಿಸೈನ್‌ ಮಾಡಿದ ನಂತರ ಪೂಜಾ ಆಫೀಸ್‌ನ ಯಾರ ಜತೆಯೂ ಸಂಪರ್ಕದಲ್ಲಿ ಇರಲಿಲ್ಲ. ಮೂರು ತಿಂಗಳ ಹಿಂದೆಯಷ್ಟೇ ನಂಬರ್‌ ಕೂಡ ಬದಲಾಯಿಸಿ ಹೊಸ ನಂಬರ್‌ ತೆಗೆದುಕೊಂಡಿದ್ದರು ಎಂದು ತಿಳಿದುಬಂದಿದೆ.

ಇನ್ನು ಒಂದು ವರ್ಷದಿಂದ ಪೂಜಾ ತನ್ನ ಸ್ನೇಹಿತರು ಹಾಗೂ ಕುಟುಂಬದವರ ಜೊತೆ ಕೂಡ ಮಾತುಕತೆ ಆಡಿರಲಿಲ್ಲವಂತೆ. ಪೂಜಾ ಸಾಯುವ ಮೂರು ತಿಂಗಳ ಹಿಂದೆ ಫೋನ್‌ನ ರೀಚಾರ್ಜ್‌ ಮುಗಿದುಹೋಗಿದೆ. ಅದಾದ ನಂತರ ಅವರು ರೀಚಾರ್ಜ್‌ ಮಾಡಿಸಿಲ್ಲ. ಅಕ್ಕಪಕ್ಕದ ಜನ ಕೂಡ ಪೂಜಾರನ್ನು ನೋಡಿ ಮೂರು ತಿಂಗಳಾಗಿತ್ತು ಎನ್ನಲಾಗಿದೆ.

ಈ ಮೂರು ತಿಂಗಳಿನಲ್ಲಿ ಪೂಜಾ ಮನೆಗೆ ಬಂದು ಹೋಗಿದ್ದ ವ್ಯಕ್ತಿ ಯಾರು, ಹೊರಗೆ ನಿಲ್ಲುತ್ತಿದ್ದ ಬೈಕ್‌ ಯಾರದ್ದು? ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !