April 28, 2026
Tuesday, April 28, 2026
spot_img

ಬೆಂಗಳೂರಿನ ಮನೆಯಲ್ಲಿ ಯುವತಿಯ ನಗ್ನಮೃತದೇಹ ಪತ್ತೆ, ಸಾವಿನ ಹಿಂದೆ ನೂರಾರು ಅನುಮಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜಧಾನಿ ಬೆಂಗಳೂರಿನ ಆಡುಗೋಡಿಯ ಬಾಡಿಗೆ ಮನೆಯಲ್ಲಿ ಯುವತಿಯೊಬ್ಬಳ ನಗ್ನ ಮೃತದೇಹ ಪತ್ತೆಯಾಗಿದೆ. ಈ ಸಾವಿನ ಹಿಂದೆ ನೂರಾರು ಅನುಮಾನ ಎದ್ದಿವೆ.

ಪೂಜಾ ದತ್ತ ಮೃತರು. ಪೂಜಾ ಮೃತದೇಹ ಇರುವ ಮನೆಗೆ ಕಾಲಿಟ್ಟ ಪೊಲೀಸರಿಗೆ ಆಘಾತವಾಗಿದೆ. ಮನೆಯ ಸ್ಥಿತಿಯನ್ನು ನೋಡಿ ಪೊಲೀಸರೇ ದಂಗಾಗಿದ್ದಾರೆ.

ಪೂಜಾ ಒಂದು ಆರ್‌ಕೆಯಲ್ಲಿ ವಾಸವಿದ್ದರು. ಇಡೀ ಮನೆಯಲ್ಲಿ ಐದಾರು ಮೂಟೆ ತುಂಬುವಷ್ಟು ಕಸವಿತ್ತು. ಅದರಲ್ಲಿ ಇದ್ದದ್ದೆಲ್ಲಾ ಬರೀ ಕಾಗದಗಳಷ್ಟೆ. ಇಡೀ ಮನೆಯ ತುಂಬಾ ಇಂಗ್ಲಿಷ್‌ ಹಾಗೂ ಹಿಂದಿಯಲ್ಲಿ ಬರೆದ ಚೀಟಿಗಳನ್ನು ಅಂಟಿಸಲಾಗಿದೆ. ಅಷ್ಟೇ ಅಲ್ಲದೆ ಏನೇನೋ ವಿಚಿತ್ರವಾದ ಚಿತ್ರಗಳನ್ನು ಬಿಡಿಸಿ ಅದನ್ನು ಗೋಡೆಗೆ ಹಾಕಲಾಗಿತ್ತು.

ಪೂಜಾ ದತ್ತ ಖಿನ್ನತೆಗೆ ಒಳಗಾಗಿದ್ರಾ ಎನ್ನುವ ಅನುಮಾನ ಪೊಲೀಸರಿಗೆ ಕಾಡಿದೆ. ಪೂಜಾ ಒಬ್ಬರೇ ಇದ್ದರಾ ಅಥವಾ ಇನ್ಯಾರಾದ್ರೂ ಅವರ ಜೊತೆ ಇದ್ದರಾ ಎಂದು ಪರಿಶೀಲಿಸಬೇಕಿದೆ.

ಪೂಜಾ ಜಾರ್ಖಂಡ್‌ ಮೂಲದವರು. ಕೆಲಸಕ್ಕಾಗಿ ಮೂರು ವರ್ಷದ ಹಿಂದೆ ಬೆಂಗಳೂರಿಗೆ ಬಂದು ಸೆಟಲ್‌ ಆಗಿದ್ದರು. ಪೂಜಾ ಮನೆಗೆ ಯುವಕನೊಬ್ಬ ಆಗಾಗ ಬಂದು ಹೋಗುತ್ತಿದ್ದ, ಆತನ ಬೈಕ್‌ ಮನೆಯ ಮುಂದೆಯೇ ಇರುತ್ತಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇನ್ನು ಪೂಜಾ ಮನೆಯಿಂದ ಹೊರಕ್ಕೆ ಅಪರೂಪಕ್ಕೆ ಬರುತ್ತಿದ್ದರು, ಬಂದರೂ ರಸ್ತೆಯಲ್ಲಿ ಒಬ್ಬರೇ ಬೈದಾಡಿಕೊಂಡು ಓಡಾಡುತ್ತಿದ್ದರು ಎಂದಿದ್ದಾರೆ.

ಪೂಜಾ ಆಡುಗೋಡೆಯ ಮನೆಯಲ್ಲಿ ಒಳಗಿನಿಂದ ಬಾಗಿಲನ್ನು ಲಾಕ್‌ ಮಾಡಿದ್ದರು. ಮೂರು ದಿನಗಳಿಂದ ಮನೆಯ ಬಾಗಿಲು ತೆಗೆದಿರಲಿಲ್ಲ. ರೂಮಿನಿಂದ ಸಹಿಸಲಾರದ ವಾಸನೆ ಬರಲು ಆರಂಭವಾಗಿತ್ತು. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬಾಗಿಲು ತೆಗೆದಾಗ ಯುವತಿಯೊಬ್ಬಳ ಮೃತದೇಹ ನಗ್ನ ಸ್ಥಿತಿಯಲ್ಲಿ ಕೊಳೆತಂತೆ ಸಿಕ್ಕಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !