ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಸುರಿದ ಭಾರೀ ಮಳೆಗೆ ಹತ್ತು ಮಂದಿಯ ಪ್ರಾಣವೇ ಹೋಗಿದೆ. ಇನ್ನು ಇದೀಗ ಇಂದು ಕೂಡ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಬೆಳಗ್ಗೆ ಮಾಮೂಲಿ ಬಿಸಿಲಿರಲಿದ್ದು, ಮಧ್ಯಾಹ್ನದ ನಂತರ ಮೋಡ ಕವಿದ ವಾತಾವರಣ ಎದುರಾಗಲಿದೆ. ಅದಾದ ನಂತರದಲ್ಲಿ ಸಂಜೆ ಅಥವಾ ರಾತ್ರಿ ಗುಡುಗು ಸಹಿತ ಮಳೆ ಬೀಳಲಿದೆ.
ಬೆಂಗಳೂರು ನಗರದಲ್ಲಿ ಹೆಚ್ಚೆಚ್ಚು ಮಂದಿ ಕೆಲಸಕ್ಕೆ ಹೋಗುವ ಕಾರಣ ಅವರು ಶಿಫ್ಟ್ ಮುಗಿಸಿ ವಾಪಾಸ್ ಬರುವ ವೇಳೆಗೆ ಮಳೆ ಬೀಳಬಹುದು. ಹೀಗಾಗಿ ಆದಷ್ಟು ಬೇಗ ಜನರು ಮನೆ ಸೇರುವುದು ಉತ್ತಮವಾಗಿದೆ.
ಬೆಂಗಳೂರು ನಗರದ ದಕ್ಷಿಣ ಭಾಗಗಳಾದ ಜೆಪಿ ನಗರ, ಜಯನಗರ, ಬನ್ನೇರುಘಟ್ಟ ರಸ್ತೆ ಹಾಗೂ ಬಿಟಿಎಂ ಲೇಔಟ್ ಮತ್ತು ಪೂರ್ವ ಭಾಗಗಳಾದ ವೈಟ್‌ಫೀಲ್ಡ್, ಮಾರತಹಳ್ಳಿ, ಎಚ್ ಎಸ್‌ಆರ್ ಲೇಔಟ್ ಹಾಗೂ ಬೆಳ್ಳಂದೂರು ಭಾಗದಲ್ಲಿ ಮಳೆಯ ತೀವ್ರತೆ ಹೆಚ್ಚಿರಲಿದೆ.
ಇನ್ನು ಶಿವಾಜಿನಗರ, ಮೆಜೆಸ್ಟಿಕ್, ಎಂಜಿ ರೋಡ್, ಶಾಂತಿನಗರ, ಯಲಹಂಕ, ಹೆಬ್ಬಾಳ ಹಾಗೂ ಆರ್‌ಟಿ ನಗರದಲ್ಲಿ ಸಾಧಾರಣ ಮಳೆ ಬೀಳಲಿದೆ.



