October 16, 2026
Friday, October 16, 2026
spot_img

Health | ಹೆಚ್ಚು ತಿನ್ನೋದಿಲ್ಲ ಆದ್ರೂ ಹೊಟ್ಟೆ ಉಬ್ಬಿದಂತೆಯೇ ಇದೆಯಾ? ಬ್ಲೋಟಿಂಗ್‌ ಲಕ್ಷಣಗಳಿವು

ನಾನು ಹೆಚ್ಚು ತಿನ್ನೋದೇ ಇಲ್ಲ ಆದರೂ ನನ್ನ ಹೊಟ್ಟೆ ಉಬ್ಬಿದಂತೆಯೇ ಇರುತ್ತದೆ. ರಾತ್ರಿ ಮಲಗುವಾಗ ಉಬ್ಬಿದ ಹೊಟ್ಟೆ ಬೆಳಗ್ಗೆಯೂ ಹಾಗೆಯೇ ಇರುತ್ತದೆ. ಹಸಿವು ಆಗೋದಿಲ್ಲ. ಆದರೆ ಹೀಗೆಲ್ಲಾ ಯಾಕೆ ಆಗುತ್ತದೆ ಅಂತ ಮಾತ್ರ ಗೊತ್ತಿರೋದಿಲ್ಲ.

ಹೊಟ್ಟೆ ಊದಿಕೊಂಡಂತೆ ಇರುವುದು ಬ್ಲೋಟಿಂಗ್‌ನ ಲಕ್ಷಣವಾಗಿದೆ. ಇನ್ನುಳಿದ ಲಕ್ಷಣಗಳು ಯಾವುದು ನೋಡಿ..

ಹೊಟ್ಟೆಯ ಮೇಲ್ಭಾಗದಲ್ಲಿ ಟೈಟ್‌ ಆದಂತೆ, ದೇಹ ಭಾರ ಭಾರ ಎನಿಸುತ್ತದೆ.

ಗ್ಯಾಸ್‌ ಪಾಸ್‌ ಮಾಡೋದಕ್ಕೆ ಕಷ್ಟವಾಗೋದು. ಹೊಟ್ಟೆಯ ತುಂಬಾ ಗ್ಯಾಸ್‌ ತುಂಬಿದಂತಹ ಗಟ್ಟಿ ಹೊಟ್ಟೆ ಇರುವುದು.

ಬಾತ್‌ರೂಮ್‌ಗೆ ಹೋಗೋಕೆ ಕಷ್ಟ. ನಿತ್ಯವೂ ಬೆಳಗ್ಗೆ ಎದ್ದು ಹೋದಂತೆ ಈಗ ಹೋಗೋಕೆ ಆಗೋದಿಲ್ಲ.

ಹೊಟ್ಟೆ ಚುಚ್ಚಿದಂತಹ ಅಥವಾ ನೋವಾದಂತಹ ಅನುಭವ. ಯಾವಾಗಲೂ ಹೊಟ್ಟೆ ತುಂಬಿದೆ ಎನ್ನುವ ಭಾವನೆ.

ಹೆಚ್ಚು ತಿಂದಿಲ್ಲ ಅಂದ್ರೂ ಸದಾ ತೇಗು.

ಮಲದಲ್ಲಿ ಬಿಳಿಯಾದ ಮ್ಯೂಕಸ್‌ ಕಾಣಿಸುವುದು. ವಿಸರ್ಜನೆ ನಂತರವೂ ಸಮಾಧಾನ ಇಲ್ಲದಿರುವುದು.

Must Read