July 23, 2026
Thursday, July 23, 2026
spot_img

WOMEN | ಪೀರಿಯಡ್ಸ್‌ ಬೇಗ ಆಗ್ಬೇಕಾ? ದಿನವನ್ನು ಪ್ರೀಪೋನ್‌ ಮಾಡಿಕೊಳ್ಳೋಕೆ ಇದನ್ನು ತಿನ್ನಿ

ದೇವಸ್ಥಾನಕ್ಕೆ, ಟ್ರಿಪ್‌ಗೆ, ಮನೆಯಲ್ಲಿ ಫಂಕ್ಷನ್‌ ಇದೆ ಎಂದೋ ಪಿರಿಯಡ್ಸ್‌ ಪ್ರೀಪೋನ್‌ ಮಾಡಿಕೊಳ್ಳಬೇಕಾದ್ರೆ ಅದಕ್ಕೆ ಮಾತ್ರೆ ಕುಡಿಯೋದು ಬೇಕಿಲ್ಲ. ಮನೆಯಲ್ಲಿ ಈ ರೀತಿ ಆಹಾರ ಸೇವನೆ ಮಾಡಿದರೆ ಪೀರಿಯಡ್ಸ್‌ ಮುನ್ನವೇ ಬರುತ್ತದೆ.

ಒಂದು ತಿಳಿದುಕೊಳ್ಳಿ. ದೇಹ ಹೀಟ್‌ ಆಗುತ್ತಿದ್ದಂತೆಯೇ ಪಿರಿಯಡ್ಸ್‌ ಬೇಗ ಬರುತ್ತದೆ. ಹೀಟ್‌ ಆಗುವ ಪದಾರ್ಥಗಳನ್ನು ಸೇವನೆ ಮಾಡಿದರೆ ಡೇಟ್‌ ಪ್ರೀಪೋನ್‌ ಆಗುತ್ತದೆ.

ಶುಂಠಿ: ಶುಂಠಿಯನ್ನು ಡೈರೆಕ್ಟ್‌ ಆಗಿ ತಿನ್ನೋದು ಕಷ್ಟವೇ. ಆದರೆ ತರಕಾರಿ ಜೊತೆ ತುರಿದು ಹಾಕಿ, ಇಲ್ಲವೇ ಕಷ್ಟಪಟ್ಟು ಕಚ್ಚಿ ನುಂಗಿಬಿಡಿ. ಅದೂ ಇಲ್ಲ ಎಂದಾದರೆ ಶುಂಠಿ ಟೀ ಮಾಡಿಕೊಂಡು ಕುಡಿಯಿರಿ.

ಅರಿಶಿಣ: ಅರಿಶಿಣದಲ್ಲಿರುವ ಆಂಟಿ ಇನ್ಫ್ಲಮೇಟರಿ ಅಂಶಗಳು ನಿಮ್ಮ ದೇಹಕ್ಕೆ ಬೆಸ್ಟ್‌. ಯುಟೆರಸ್‌ಗೆ ರಕ್ತಸಂಚಲನವನ್ನು ಜಾಸ್ತಿ ಮಾಡೋದಕ್ಕೆ ಅರಿಶಿಣ ಸಹಾಯ ಮಾಡುತ್ತದೆ.

ಇದನ್ನು ನಂಬೋಕೆ ಕಷ್ಟವಾಗಬಹುದು. ಆದರೆ ಬಿಸಿಬಿಸಿ ನೀರಿನಲ್ಲಿ ನಿತ್ಯವೂ ಸ್ನಾನ ಮಾಡೋದು ಕೂಡ ಪೀರಿಯಡ್ಸ್‌ ಹತ್ತಿರ ಬರುವಂತೆ ಮಾಡುತ್ತದೆ. ಬಿಸಿ ನೀರಿಗೆ ಒಂದೆರಡು ಹನಿ ಲ್ಯಾವೆಂಡರ್‌ ಎಣ್ನೆ ಹಾಕಿಕೊಂಡು ಸ್ನಾನ ಮಾಡಿ ರಿಲ್ಯಾಕ್ಸ್‌ ಆಗಿ.

ವಿಟಮಿನ್‌ ಸಿ ಇರುವ ಪದಾರ್ಥಗಳನ್ನು ಸೇವಿಸಿ. ಆರೆಂಜ್‌, ಬೆರೀಸ್‌, ಪಾಲಕ್‌, ಪಪಾಯ, ಟೊಮ್ಯಾಟೊ, ನಿಂಬೆಹಣ್ಣು, ಮೊಳಕೆ ಕಾಳುಗಳನ್ನು ಸೇವಿಸಿ.

ಸದಾ ರಿಲ್ಯಾಕ್ಸ್‌ ಆಗಿರಿ. ಆದಷ್ಟು ಒತ್ತಡದಿಂದ ದೂರ ಇರಿ. ಇದು ಬರೀ ಪಿರಿಯಡ್ಸ್‌ಗೆ ಅಷ್ಟೇ ಅಲ್ಲ ಆರೋಗ್ಯಕ್ಕೂ ಉತ್ತಮವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !