ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಖನೌ ವಿಮಾನ ನಿಲ್ದಾಣದಲ್ಲಿ ಅಚ್ಚರಿಯ ಘಟನೆಯೊಂದು ವಿಮಾನಯಾನದಲ್ಲಿ ತಾತ್ಕಾಲಿಕ ವ್ಯತ್ಯಯಕ್ಕೆ ಕಾರಣವಾಯಿತು. ರಾಯಪುರಕ್ಕೆ ತೆರಳಲು ಸಿದ್ಧವಾಗಿದ್ದ ಇಂಡಿಗೋ ವಿಮಾನ, ರನ್‌ವೇ ಮೇಲೆ ಮಂಗಗಳ ಗುಂಪು ಓಡಾಡುತ್ತಿರುವುದು ಗಮನಕ್ಕೆ ಬಂದ ತಕ್ಷಣ ಟೇಕ್‌ಆಫ್ ಪ್ರಕ್ರಿಯೆಯನ್ನು ರದ್ದುಗೊಳಿಸಲಾಯಿತು. ಪೈಲಟ್‌ನ ಸಮಯಪ್ರಜ್ಞೆಯಿಂದ ಸಂಭವಿಸಬಹುದಾದ ಅಪಾಯ ತಪ್ಪಿದಂತಾಗಿದೆ.
ಸುಮಾರು 150 ಪ್ರಯಾಣಿಕರಿದ್ದ ವಿಮಾನ ಗುರುವಾರ ಹಾರಾಟಕ್ಕೆ ಸಜ್ಜಾಗಿದ್ದ ವೇಳೆ ಈ ಘಟನೆ ನಡೆದಿದೆ. ರನ್‌ವೇ ಸಮೀಪ ಮಂಗಗಳು ಓಡಾಡುತ್ತಿರುವುದನ್ನು ಕಂಡ ಪೈಲಟ್ ತಕ್ಷಣ ವಿಮಾನವನ್ನು ನಿಯಂತ್ರಿಸಿ, ವಾಯು ಸಂಚಾರ ನಿಯಂತ್ರಣ ಕೇಂದ್ರಕ್ಕೆ ಮಾಹಿತಿ ನೀಡಿದ್ದಾರೆ. ಬಳಿಕ ವಿಮಾನವನ್ನು ಹಿಂತಿರುಗಿಸಿ ಅಗತ್ಯ ಪರಿಶೀಲನೆ ನಡೆಸಲಾಯಿತು.
ಇದನ್ನೂ ಓದಿ:
ಘಟನೆಯಿಂದ ಕೆಲ ವಿಮಾನಗಳ ವೇಳಾಪಟ್ಟಿಯಲ್ಲಿ ವಿಳಂಬ ಉಂಟಾದರೂ, ವನ್ಯಜೀವಿ ನಿರ್ವಹಣಾ ತಂಡ ತಕ್ಷಣ ಕಾರ್ಯಾಚರಣೆ ನಡೆಸಿ ರನ್‌ವೇ ಪ್ರದೇಶವನ್ನು ಸುರಕ್ಷಿತಗೊಳಿಸಿತು. ಮಂಗಗಳನ್ನು ಸ್ಥಳದಿಂದ ಓಡಿಸಿದ ಬಳಿಕ ವಿಮಾನ ಸಂಚಾರ ಮತ್ತೆ ಸಾಮಾನ್ಯ ಸ್ಥಿತಿಗೆ ಮರಳಿತು.



