ಹೊಸದಿಗಂತ ಡಿಜಿಟಲ್ ಡೆಸ್ಕ್:
ನೀವು ಚಿನ್ನ ಖರೀದಿಸುವ ಆಲೋಚನೆಯಲ್ಲಿದ್ದೀರಾ? ಹಾಗಿದ್ದಲ್ಲಿ ನಿಮಗೆ ಇಲ್ಲಿದೆ ಒಂದು ಶುಭ ಸುದ್ದಿ. ಕಳೆದ ಕೆಲವು ದಿನಗಳಿಂದ ಏರಿಳಿತ ಕಾಣುತ್ತಿದ್ದ ಚಿನ್ನದ ದರದಲ್ಲಿ ಈಗ ಗಣನೀಯ ಕುಸಿತ ಕಂಡುಬಂದಿದೆ. ಆಭರಣ ಪ್ರಿಯರಿಗೆ ಮತ್ತು ಹೂಡಿಕೆದಾರರಿಗೆ ಇದು ಅತ್ಯುತ್ತಮ ಸಮಯ ಎನ್ನಬಹುದು.
ಈ ವಾರದ ಆರಂಭದಲ್ಲಿ ಪ್ರತಿ ಗ್ರಾಮ್‌ಗೆ 14,120 ರೂಪಾಯಿ ಆಸುಪಾಸಿನಲ್ಲಿದ್ದ ಚಿನ್ನದ ಬೆಲೆ, ಈಗ 13,835 ರೂಪಾಯಿಗೆ ತಲುಪಿದೆ. ಅಂದರೆ ಕಳೆದ 10 ದಿನಗಳಲ್ಲಿ ಸುಮಾರು 350 ರೂಪಾಯಿಗಳಷ್ಟು ಬೆಲೆ ಇಳಿಕೆಯಾಗಿದೆ. ಇನ್ನು ಕಳೆದ ಮೂರು ವಾರಗಳ ಲೆಕ್ಕಾಚಾರ ನೋಡಿದರೆ, ಬೆಲೆಯಲ್ಲಿ 400 ರೂಪಾಯಿಗಿಂತಲೂ ಹೆಚ್ಚು ಇಳಿಕೆ ದಾಖಲಾಗಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲದೆ, ಜಾಗತಿಕ ಮಾರುಕಟ್ಟೆಯಲ್ಲೂ ಚಿನ್ನದ ದರ ಇಳಿಮುಖವಾಗಿದೆ.
ಇಂದಿನ ಚಿನ್ನ ಮತ್ತು ಬೆಳ್ಳಿ ದರಗಳು:
22 ಕ್ಯಾರಟ್ ಚಿನ್ನ (10 ಗ್ರಾಂ): 1,38,350 ರೂಪಾಯಿ.
24 ಕ್ಯಾರಟ್ ಅಪರಂಜಿ ಚಿನ್ನ (10 ಗ್ರಾಂ): 1,50,930 ರೂಪಾಯಿ.
ಬೆಳ್ಳಿ ಬೆಲೆ (100 ಗ್ರಾಂ): 26,500 ರೂಪಾಯಿ.
ಚಿನ್ನದ ಬೆಲೆಯಲ್ಲಿ ಭಾರಿ ವ್ಯತ್ಯಾಸಗಳು ಕಂಡುಬರುತ್ತಿದ್ದರೂ, ಬೆಳ್ಳಿಯ ಬೆಲೆ ಮಾತ್ರ ತುಲನಾತ್ಮಕವಾಗಿ ಸ್ಥಿರವಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನಕ್ಕೆ 1,38,350 ರೂಪಾಯಿ ಇದ್ದರೆ, 100 ಗ್ರಾಂ ಬೆಳ್ಳಿಯ ಬೆಲೆ 26,500 ರೂಪಾಯಿ ಇದೆ. ಇನ್ನು ನೆರೆಯ ರಾಜ್ಯಗಳಾದ ತಮಿಳುನಾಡು ಮತ್ತು ಕೇರಳದ ಕೆಲವು ನಗರಗಳಲ್ಲಿ ಬೆಳ್ಳಿಯ ಬೆಲೆ 27,000 ರೂಪಾಯಿಗಳ ವರೆಗೆ ಮಾರಾಟವಾಗುತ್ತಿದೆ.
ಜಾಗತಿಕ ಆರ್ಥಿಕ ಪರಿಸ್ಥಿತಿ ಮತ್ತು ಮಾರುಕಟ್ಟೆಯ ಏರಿಳಿತಗಳ ನಡುವೆ ಚಿನ್ನದ ದರ ಇಳಿಕೆಯಾಗಿರುವುದು ಸಾಮಾನ್ಯ ಗ್ರಾಹಕರಿಗೆ ನೆಮ್ಮದಿ ತಂದಿದೆ. ಮುಂದಿನ ದಿನಗಳಲ್ಲಿ ಬೆಲೆ ಇನ್ನು ಕುಸಿಯಲಿದೆಯೇ ಅಥವಾ ಏರಿಕೆಯಾಗಲಿದೆಯೇ ಎಂದು ಕಾದು ನೋಡಬೇಕಿದೆ.



