ಬೆಂಗಳೂರು ಅಂದ್ರೆ ಐಟಿ ಸಿಟಿ ಮಾತ್ರ ಅಲ್ಲ, ಶಾಪಿಂಗ್ ಪ್ರಿಯರಿಗೂ ಇದು ಹಾಟ್‌ಸ್ಪಾಟ್. ಬ್ರ್ಯಾಂಡೆಡ್ ವಸ್ತುಗಳಿಂದ ಹಿಡಿದು ಕಡಿಮೆ ಬೆಲೆಯ ಟ್ರೆಂಡಿ ಡ್ರೆಸ್, ಫುಟ್‌ವೇರ್, ಆಕ್ಸೆಸರೀಸ್‌ವರೆಗೆ ಎಲ್ಲವೂ ಸಿಗುವ ಹಲವು ಮಾರುಕಟ್ಟೆಗಳು ನಗರದಲ್ಲಿವೆ. “ಕಡಿಮೆ ಖರ್ಚಿನಲ್ಲಿ ಚೆನ್ನಾಗಿ ಶಾಪಿಂಗ್ ಮಾಡ್ಬೇಕು” ಅನ್ನೋರಿಗೆ ಈ ಜಾಗಗಳು ಖಂಡಿತ ಇಷ್ಟವಾಗುತ್ತವೆ.
ಚಿಕ್ಕಪೇಟೆ – ಬಜೆಟ್ ಶಾಪಿಂಗ್‌ಗೊಂದು ಸ್ವರ್ಗ
ಸೀರೆ, ಡ್ರೆಸ್ ಮೆಟೀರಿಯಲ್, ಹೋಮ್ ಡೆಕರ್, ಫ್ಯಾನ್ಸಿ ಐಟಂಗಳು… ಏನು ಬೇಕಾದರೂ ಕಡಿಮೆ ದರದಲ್ಲಿ ಸಿಗೋ ಜಾಗ ಚಿಕ್ಕಪೇಟೆ. ಹೋಲ್‌ಸೇಲ್ ರೇಟ್‌ನಲ್ಲಿ ಶಾಪಿಂಗ್ ಮಾಡಲು ಇದು ಸೂಪರ್ ಸ್ಪಾಟ್.
ಕಮರ್ಷಿಯಲ್ ಸ್ಟ್ರೀಟ್ – ಟ್ರೆಂಡ್ & ಸ್ಟೈಲ್
ಯುವಜನರಿಗೆ ಫೇವರಿಟ್ ಜಾಗ. ಟ್ರೆಂಡಿ ಟಾಪ್, ಜೀನ್ಸ್, ಬ್ಯಾಗ್, ಶೂಸ್, ಜ್ಯುವೆಲರಿ ಎಲ್ಲವೂ ಇಲ್ಲಿ ಲಭ್ಯ. ಬಾರ್ಗೇನ್ ಮಾಡುವ ಕಲೆ ಇದ್ದರೆ ಇನ್ನೂ ಕಡಿಮೆ ದರಕ್ಕೆ ವಸ್ತು ಸಿಗುತ್ತದೆ.
ಇದನ್ನೂ ಓದಿ:
ಜಯನಗರ 4th Block – ಕ್ಲಾಸ್ + ಬಜೆಟ್
ಕುಟುಂಬದ ಜೊತೆ ಶಾಪಿಂಗ್‌ಗೆ ಸೂಕ್ತವಾದ ಸ್ಥಳ. ಬಟ್ಟೆ, ಪುಸ್ತಕ, ಮನೆ ಬಳಕೆಯ ವಸ್ತುಗಳು ಹಾಗೂ ಸ್ಟ್ರೀಟ್ ಶಾಪಿಂಗ್ – ಎಲ್ಲವೂ ಒಂದೇ ಕಡೆ.
ಮೆಜೆಸ್ಟಿಕ್ ಸುತ್ತಮುತ್ತ – ಎಲ್ಲವೂ ಒನ್ ಪ್ಲೇಸ್
ಬ್ಯಾಗ್, ಚಪ್ಪಲಿ, ಎಲೆಕ್ಟ್ರಾನಿಕ್ಸ್, ಕಿಚನ್ ಐಟಂಗಳು… ಕೈಗೆಟುಕುವ ದರದಲ್ಲಿ ಸಿಗುತ್ತವೆ. ವಿದ್ಯಾರ್ಥಿಗಳಿಗೆ ಇದು ಬೆಸ್ಟ್ ಆಯ್ಕೆ.
ಇಂದಿರಾನಗರ ಸಂಡೇ ಮಾರ್ಕೆಟ್ – ಹಿಡನ್ ಜೆಮ್
ವೀಕೆಂಡ್‌ನಲ್ಲಿ ಮಾತ್ರ ಸಿಗೋ ವಿಶೇಷ ಅನುಭವ. ಫ್ಯಾಷನ್ ವಸ್ತುಗಳು, ಕೈತೋಟದ ಉತ್ಪನ್ನಗಳು, ಡಿಸೈನ್ ಪೀಸ್‌ಗಳು ಇಲ್ಲಿ ಕಡಿಮೆ ದರಕ್ಕೆ ಸಿಗುತ್ತವೆ.



