May 3, 2026
Sunday, May 3, 2026
spot_img

ಬ್ರಿಜ್ ಭೂಷಣ್ ಶರಣ್ ಸಿಂಗ್‌ ವಿರುದ್ಧ ಮತ್ತೆ ಗುಡುಗಿದ ಕುಸ್ತಿಪಟು ವಿನೇಶ್ ಫೋಗಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಕುಸ್ತಿ ಫೆಡರೇಶನ್‌ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್‌ ವಿರುದ್ಧ ಕುಸ್ತಿಪಟು ವಿನೇಶ್ ಫೋಗಟ್ ಅವರು ಮತ್ತೆ ಗಂಭೀರ ಆರೋಪವನ್ನು ಮಾಡಿದ್ದು, ಲೈಂಗಿಕ ಕಿರುಕುಳಕ್ಕೆ ಒಳಗಾದ ಆರು ಮಂದಿಯಲ್ಲಿ ನಾನೂ ಒಬ್ಬಳು ಎಂದು ಆರೋಪಿಸಿದ್ದಾರೆ.

ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿರುವ ವಿನೇಶ್, ಲೈಂಗಿಕ ಕಿರುಕುಳಕ್ಕೆ ಒಳಗಾದ ಆರು ಮಂದಿಯಲ್ಲಿ ನಾನೂ ಒಬ್ಬಳು. ಈ ವೇಳೆ ನನಗೆ ಜೀವ ಬೆದರಿಕೆ ಕೂಡ ಇತ್ತು. ಇದೀಗ ಬ್ರಿಜ್ ಅವರಿಗೆ ಸಂಬಂಧಿಸಿದ ಗೊಂಡಾದಲ್ಲಿ ರಾಷ್ಟ್ರೀಯ ಓಪನ್ ರ‍್ಯಾಂಕಿಂಗ್ ಟೂರ್ನಮೆಂಟ್‌ ನಡೆಯಲಿದ್ದು, ಈ ವೇಳೆ ಮಾಜಿ ಮುಖ್ಯಸ್ಥರಿಗೆ ಹತ್ತಿರವಿರುವ ವ್ಯಕ್ತಿಗಳಿಂದ ಪಂದ್ಯಾವಳಿಯಲ್ಲಿ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಆರೋಪಿಸಿದ್ದಾರೆ.

ಟೂರ್ನಮೆಂಟ್‌ ಸಮಯದಲ್ಲಿ ನನಗೆ ಅಥವಾ ತನ್ನ ತಂಡದ ಸದಸ್ಯರಿಗೆ ಯಾವುದೇ ರೀತಿಯ ಅಹಿತಕರ ಘಟನೆ ನಡೆದರೆ ಅದಕ್ಕೆ ಕೇಂದ್ರ ಸರ್ಕಾರವೇ ಹೊಣೆಯಾಗಲಿದೆ. ಈ ವೇಳೆ ಎಲ್ಲಾ ಮಾಧ್ಯಮಗಳು ಮತ್ತು ಕ್ರೀಡಾ ಸಮುದಾಯವು ಆ ಸ್ಥಳದಲ್ಲಿ ಹಾಜರಿರಬೇಕು ಎಂದು ಒತ್ತಾಯಿಸಿದರು.

ನಾನು ಮತ್ತೆ ದೇಶಕ್ಕಾಗಿ ಪದಕಗಳನ್ನು ಗೆಲ್ಲಲು ಬಯಸುತ್ತೇನೆ. ಆದರೆ, ಲೆವೆಲ್ ಪ್ಲೇಯಿಂಗ್ ಫೀಲ್ಡ್ ಬಗ್ಗೆ ಅನುಮಾನ ಇದೆ. ನನಗೆ ಯಾವುದೇ ಸವಲತ್ತು , ವಿಶೇಷ ಸತ್ಕಾರವು ಬೇಡ. ಕೇವಲ ಕ್ರೀಡಾ ಸಮಯದಲ್ಲಿ ಫಲಿತಾಂಶಗಳು ಮ್ಯಾಟ್‌ನಲ್ಲಿರುವ ಕ್ರೀಡಾಪಟುಗಳ ಕಠಿಣ ಪರಿಶ್ರಮಕ್ಕೆ ಅನುಗುಣವಾಗಿ ಇರಲಿ ಎಂದು ನಾನು ಬಯಸುತ್ತೇನೆ ಎಂದು ಅವರು ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !