September 16, 2026
Wednesday, September 16, 2026
spot_img

IPL | ಹೈದರಾಬಾದ್ ಗೆ ಸೋಲಿನ ಏಟು: ಗೆದ್ದು ಬೀಗಿದ ಕೋಲ್ಕತ್ತಾ ನೈಟ್ ರೈಡರ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಭರ್ಜರಿ ಬ್ಯಾಟಿಂಗ್ ನಡೆಸಿದ ಕೋಲ್ಕತ್ತಾ ನೈಟ್ ರೈಡರ್ಸ್ 7 ವಿಕೆಟ್‌ಗಳ ಜಯ ಸಾಧಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಹೈದರಾಬಾದ್165ಕ್ಕೆ ಆಲೌಟ್ ಆಗಿತ್ತು. 166 ರನ್‌ಗಳ ಗುರಿಯನ್ನ ಬೆನ್ನಟ್ಟಿದ ಕೆಕೆಆರ್ ಗೆಲುವಿನ ನಗೆ ಬೀರಿದೆ.

ಅಜಿಂಕ್ಯ ರಹಾನೆ 43 ಮತ್ತು ಫಿನ್ ಅಲೆನ್ 29 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ಬಳಿಕ ಎರಡನೇ ವಿಕೆಟ್‌ಗೆ ರಹಾನೆ ಮತ್ತು ರಘುವಂಶಿ 84 ರನ್‌ಗಳ ಜೊತೆಯಾಟ ನೀಡಿದರು. ಈ ವೇಳೆ ಶಕೀಬ್ ಹುಸೇನ್ ಬೌಲಿಂಗ್‌ನಲ್ಲಿ ರಹಾನೆ ಕ್ಯಾಚ್ ನೀಡಿ ಔಟ ಆದರು.

ಇತ್ತ ರಘುವಂಶಿ 47 ಎಸೆತಗಳಲ್ಲಿ 5 ಬೌಂಡರಿ 2 ಸಿಕ್ಸರ್​ಗಳ ಸಹಿತ 59 ರನ್ ಗಳಿಸಿದರು. ರಿಂಕು ಸಿಂಗ್ 11 ಎಸೆತಗಳಲ್ಲಿ ಅಜೇಯ 22 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ಗಡಿ ದಾಟಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !