May 4, 2026
Monday, May 4, 2026
spot_img

CINE | ರಾಜಮೌಳಿ ಸಿನಿಮಾಕ್ಕೆ ʼಜಲಕಂಟಕʼ, ಹೈದರಾಬಾದ್‌ನಲ್ಲಿ ಶೂಟಿಂಗ್‌ ಸ್ಥಗಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಿರ್ದೇಶಕ ಎಸ್‌.ಎಸ್‌. ರಾಜಮೌಳಿಯ ಬಹುನಿರೀಕ್ಷಿತ ಸಿನಿಮಾ ವಾರಣಾಸಿಗೆ ನೀರಿನ ಸಮಸ್ಯೆ ಎದುರಾಗಿದೆಯಂತೆ. ಇದು ಸಣ್ಣ ಪುಟ್ಟ ಸಮಸ್ಯೆ ಅಲ್ಲ. ನೀರಿನ ಸಮಸ್ಯೆಯಿಂದಾಗಿ ಶೂಟಿಂಗ್‌ ಸ್ಥಗಿತವಾಗಿದೆ.

ಶೂಟಿಂಗ್‌ಗಾಗಿ 50 ನೀರಿನ ಟ್ಯಾಂಕರ್‌ಗಳು ಬೇಕು ಎಂದು ಹೈದರಾಬಾದ್‌ ಮಹಾನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಮನವಿ ಮಾಡಲಾಗಿತ್ತು. ಆದರೆ ಮಂಡಳಿ ಮನವಿಯನ್ನು ತಿರಸ್ಕರಿಸಿದೆ.

ತಲೆ ಹತ್ತು ಸಾವಿರ ಲೀಟರ್‌ ಸಾಮರ್ಥ್ಯದ 150 ಟ್ಯಾಂಕರ್‌ಗಳ ನೀರನ್ನು ಕೋರಲಾಗಿತ್ತು, ಆದರೆ ಅಷ್ಟೊಂದನ್ನು ನೀಡಲು ಆಗುವುದಿಲ್ಲ ಎಂದು ಮಂಡಳಿ ಹೇಳಿದೆ. ಫಿಲಂ ಸಿಟಿಯಲ್ಲಿ ನೀರೊಳಗಿನ ದೃಶ್ಯದ ಚಿತ್ರೀಕರಣಕ್ಕಾಗಿ ಅಷ್ಟೊಂದು ನೀರಿನ ಅಗತ್ಯ ಇತ್ತು ಎಂದು ನಿರ್ದೇಶಕರು ಹೇಳಿದ್ದಾರೆ.

ತೀವ್ರ ಬೇಸಿಗೆ ಇದೆ, ಟ್ಯಾಂಕರ್‌ಗಳ ಅಭಾವವೂ ಇದೆ. ಜನರಿಗೆ ಕುಡಿಯುವ ನೀರು ಹಾಗೂ ದಿನಬಳಕೆಗೆ ಪೂರೈಸಲು ಕಷ್ಟವಾಗುತ್ತಿದೆ. ಇನ್ನು ಶೂಟಿಂಗ್‌ಗೆ ಅಷ್ಟೊಂದು ನೀರು ಕೊಡೋದು ಕಷ್ಟ ಎಂದು ಹೇಳಿದೆ. ಇದರಿಂದ ಸಿನಿಮಾ ತಂಡ ಬೇಸರದಲ್ಲಿದೆ. ಇದಕ್ಕೆ ಪರ್ಯಾಯವಾಗಿ ಏನು ಮಾಡುತ್ತಾರೋ ಕಾದುನೋಡಬೇಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !