May 5, 2026
Tuesday, May 5, 2026
spot_img

15 ಅಡಿ ಮೊಸಳೆಯ ಹೊಟ್ಟೆಯಲ್ಲಿ ಉದ್ಯಮಿಯ ಅವಶೇಷ! ‘Crocodile ಏರ್ ಲಿಫ್ಟ್’ ನಡೆದದ್ದೇ ರೋಚಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಆಫ್ರಿಕಾದಲ್ಲಿ ನಡೆದ ರಕ್ಷಣಾ ಕಾರ್ಯಾಚರಣೆ ಇದೀಗ ಜಾಗತಿಕ ಗಮನ ಸೆಳೆದಿದೆ. ಸುಮಾರು 15 ಅಡಿ ಉದ್ದದ ಬೃಹತ್ ಮೊಸಳೆಯನ್ನು ಗುಂಡಿಟ್ಟು ಕೊಂದು ಹೆಲಿಕಾಪ್ಟರ್ ಮೂಲಕ ನದಿಯಿಂದ ಹೊರತೆಗೆದ ಘಟನೆ ನಡೆದಿದೆ.

ಕೇಪ್ಟೌನ್ ಸಮೀಪದ ಕೋಮತಿ ನದಿಯಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ, ಮೊಸಳೆಯ ಹೊಟ್ಟೆಯಲ್ಲಿ 59 ವರ್ಷದ ಉದ್ಯಮಿ ಗೇಬ್ರಿಯಲ್ ಬಟಿಸ್ಟಾ ಅವರ ದೇಹದ ಭಾಗಗಳು ಪತ್ತೆಯಾಗಿವೆ ಎಂದು ಶಂಕಿಸಲಾಗಿದೆ. ಮೇ 2ರಂದು ನಡೆದ ಈ ಕಾರ್ಯಾಚರಣೆಯಲ್ಲಿ ಭಾರಿ ಭದ್ರತಾ ಪಡೆಗಳು ಭಾಗವಹಿಸಿದ್ದವು.

ಇದನ್ನೂ ಓದಿ:

ಮೂಲ ಮಾಹಿತಿ ಪ್ರಕಾರ, ಏಪ್ರಿಲ್ 28ರಂದು ಭಾರೀ ಮಳೆಯಿಂದಾಗಿ ಅವರ ಕಾರು ಸೇತುವೆ ಬಳಿ ನೀರಿನಲ್ಲಿ ಕೊಚ್ಚಿಹೋಗಿತ್ತು. ಆ ಬಳಿಕ ಅವರು ನಾಪತ್ತೆಯಾಗಿದ್ದರು. ಡ್ರೋನ್ ಮತ್ತು ಹೆಲಿಕಾಪ್ಟರ್ ಸಹಾಯದಿಂದ ಹುಡುಕಾಟ ನಡೆಸುತ್ತಿದ್ದಾಗ ಅಸಹಜವಾಗಿ ಉಬ್ಬಿದ ಹೊಟ್ಟೆಯ ಮೊಸಳೆ ಕಂಡುಬಂದಿದೆ.

ಮೊಸಳೆಯನ್ನು ಸೆರೆಹಿಡಿದು ನಂತರ ಗುಂಡಿಟ್ಟು ಕೊಂದು, ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಯಿತು. ಪರಿಶೀಲನೆಯಲ್ಲಿ ಮನುಷ್ಯನ ಪಕ್ಕೆಲುಬುಗಳು, ಕೈಗಳು, ಬಟ್ಟೆ ಹಾಗೂ ಉಂಗುರ ಪತ್ತೆಯಾಗಿದ್ದು, ಅವು ಬಟಿಸ್ಟಾ ಅವರಿಗೆ ಸೇರಿರಬಹುದೆಂದು ಶಂಕಿಸಲಾಗಿದೆ. DNA ಪರೀಕ್ಷೆ ನಡೆಯುತ್ತಿದೆ.

ಅವರು ಮೊಸಳೆ ದಾಳಿಗೆ ಒಳಗಾಗಿ ಸಾವನ್ನಪ್ಪಿದರೇ ಅಥವಾ ನೀರಿನಲ್ಲಿ ಮುಳುಗಿ ಮೃತಪಟ್ಟ ನಂತರ ದೇಹವನ್ನು ಮೊಸಳೆ ತಿಂದಿತೇ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಈ ಘಟನೆ ಸ್ಥಳೀಯರಲ್ಲಿ ಭೀತಿ ಮತ್ತು ಕುತೂಹಲ ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !