May 6, 2026
Wednesday, May 6, 2026
spot_img

ಸ್ಮೃತಿ ಮಂಧಾನ ಎಕ್ಸ್‌ ಪಲಾಶ್ ಮುಚ್ಚಲ್‌ಗೆ ಮತ್ತೆ ಸಂಕಷ್ಟ, ಕೇಸ್‌ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಂಗೀತ ಸಂಯೋಜಕ ಮತ್ತು ಸಿನಿಮಾ ನಿರ್ಮಾಪಕ ಪಲಾಶ್ ಮುಚ್ಚಲ್ ಇದೀಗ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ಭಾರತೀಯ ಕ್ರಿಕೆಟ್ ತಾರೆ ಸ್ಮೃತಿ ಮಂಧಾನ ಬಾಲ್ಯದ ಗೆಳೆಯ ವಿಜ್ಞಾನ್ ಪ್ರಕಾಶ್ ಮಾನೆ ನೀಡಿದ ದೂರಿನ ಮೇರೆಗೆ ಸಾಂಗ್ಲಿಯಲ್ಲಿ ಪಲಾಶ್ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ವಿಜ್ಞಾನ್ ಪ್ರಕಾಶ್ ಸಿನಿಮಾ ನಿರ್ಮಾಣಕ್ಕಾಗಿ ಪಲಾಶ್‌ಗೆ 25 ಲಕ್ಷ ನೀಡಿದ್ದರು. ಆದರೆ ಪಲಾಶ್ ಆ ಹಣವನ್ನು ಹಿಂತಿರುಗಿಸಿಲ್ಲ ಎಂದು ಆರೋಪಿಸಿದ್ದಾರೆ. ಈ ವಿಷಯವಾಗಿ ಇಬ್ಬರ ನಡುವೆ ಮಾತಿನ ಚಕಾಮಕಿ ಕೂಡ ನಡೆದಿದೆ. ಆ ವೇಳೆ ಅದು ವಿಕೋಪಕ್ಕೆ ಹೋಗಿ ಪಲಾಶ್, ವಜ್ಞಾನ್ ಪ್ರಕಾಶ್ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ದೂರುದಾರ ವಿಜ್ಞಾನ್, ಆರು ತಿಂಗಳಲ್ಲಿ ಸಿನಿಮಾ ಪೂರ್ಣಗೊಳಿಸುವುದಾಗಿ ಅವರು ನನಗೆ ಭರವಸೆ ನೀಡಿದ್ದರು. ಆದರೆ ಅವರು ನನಗೆ ಮೋಸ ಮಾಡಿದ್ದಾರೆ. ನಾನು ಹಣವನ್ನು ವಾಪಸ್ ಕೇಳಿದಾಗ ಅವರು ತಪ್ಪಿಸಿಕೊಂಡು ಓಡಾತ್ತಿದ್ದರು. ನಾನು ಅವರನ್ನು ನೇರವಾಗಿ ಪ್ರಶ್ನಿಸಿದಾಗ, ಅವರು ಅತ್ಯಂತ ಅವಹೇಳನಕಾರಿ ಭಾಷೆಯನ್ನು ಬಳಸಿದ್ದಾರೆ. ಅದನ್ನು ನಾನು ಕ್ಯಾಮರಾ ಮುಂದೆ ಹೇಳಲು ಕೂಡ ಸಾಧ್ಯವಿಲ್ಲ. ಎಂದು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !