ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್‌ನಲ್ಲಿ ನಡೆದ ಅವಳಿ ಸ್ಫೋಟದ ಹಿಂದೆ ಬಿಜೆಪಿ ಭಾಗಿಯಾಗಿದೆ ಎಂದು ಪಂಜಾಬ್ ಸಿಎಂ ಭಗವಂತ್ ಮಾನ್ ಅವರು ಗಂಭೀರ ಆರೋಪ ಮಾಡಿದ್ದಾರೆ.
ಮಂಗಳವಾರ ತಡರಾತ್ರಿ ಅಮೃತಸರದ ಖಾಸಾ ಪ್ರದೇಶದ ಸೇನಾ ಶಿಬಿರದ ಹೊರಗೆ ಐಇಡಿ ಸ್ಫೋಟಗೊಂಡಿದ್ದು, ಅದೇ ರೀತಿ ಜಲಂಧರ್‌ನ ಬಿಎಸ್‌ಎಫ್ ಪ್ರಧಾನ ಕಚೇರಿಯ ಬಳಿ ಸ್ಕೂಟರ್ ಸ್ಫೋಟ ಸಂಭವಿಸಿತ್ತು.
ಈ ಘಟನೆಗಳ ಕುರಿತು ಪ್ರತಿಕ್ರಿಯೆ ನೀಡಿದ ಮಾನ್, ಇದರ ಹಿಂದೆ ಬಿಜೆಪಿಯ ಕೈವಾಡವಿದೆ. ಮುಂದಿನ ಪಂಜಾಬ್ ವಿಧಾನಸಭಾ ಚುನಾವಣೆಗೆ ಮುನ್ನ ದೊಡ್ಡ ರಾಜಕೀಯ ಬದಲಾವಣೆ ಭಾಗವಾಗಿ ಈ ಸ್ಫೋಟ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.
ಇನ್ನು ಪಂಜಾಬ್ ಡಿಜಿಪಿ ಗೌರವ್ ಮಾನ್, ಈ ಘಟನೆ ಹಿಂದೆ ಪಾಕಿಸ್ತಾನ ಬೆಂಬಲಿತ ಐಎಸ್‌ಐ ಭಯೋತ್ಪಾದಕ ಸಂಘಟನೆ ಸಂಚು ಇರಬಹುವುದು ಎಂದು ಊಹಿಸಿದ್ದಾರೆ. ಈ ಕುರಿತು ತನಿಖೆಗಳು ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಘಟನೆ ಬೆನ್ನಲ್ಲೇ ರಾಜ್ಯದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಪಂಜಾಬ್ ಪೊಲೀಸರು, ಕೇಂದ್ರ ಸಂಸ್ಥೆಗಳೊಂದಿಗೆ ತನಿಖೆಯನ್ನು ಪ್ರಾರಂಭಿಸಿದ್ದಾರೆ.



