ಮೇಷ
ಸಮಾಧಾನಕರ ದಿನ. ದೊಡ್ಡ ಪ್ರಗತಿ ಇಲ್ಲದಿದ್ದರೂ ಹಿನ್ನಡೆ ಕೂಡಾ ಇಲ್ಲ. ಕೌಟುಂಬಿಕ ಚಿಂತೆ ಪರಿಹಾರ. ಆರ್ಥಿಕ ಸ್ಥಿತಿ ತೃಪ್ತಿಕರ.
ವೃಷಭ
ಇತರರ ಜತೆ ವ್ಯವಹಾರದಲ್ಲಿ ಎಚ್ಚರ ವಹಿಸಿ. ಮೋಸ ಹೋಗುವ ಸಾಧ್ಯತೆ. ಕೌಟುಂಬಿಕ ವಿಷಯದಲ್ಲಿ ಭಾವನಾತ್ಮಕ ಏರುಪೇರು. ಮಿಥುನ
ವಿರಾಮ ಸಿಗದಷ್ಟು ಕಾರ್ಯದ ಒತ್ತಡ. ಪ್ರೇಮದ ವಿಚಾರದಲ್ಲಿ ಪ್ರತಿಕೂಲ ಬೆಳವಣಿಗೆ. ನಾಜೂಕಿನಿಂದ ನಿಭಾಯಿಸಿ. ಬಂಧು ಜತೆ ವಿರಸ. ಕಟಕ
ಯಶ ಸಾಧಿಸಲು ತಾಳ್ಮೆ ಅವಶ್ಯ. ದುಡುಕಿನ ನಡೆ ಬೇಡ. ಆರ್ಥಿಕ ಹಿನ್ನಡೆ ಬಾಧಿಸಬಹುದು. ಮನೆಯವರ ಸಂಗದಲ್ಲಿ ಸಮಾಧಾನ.
ಸಿಂಹ
ಕೆಲದಿನಗಳ ಕಷ್ಟದ ಬಳಿಕ ಖುಷಿ ತರುವ ಹೊಸ ಬೆಳವಣಿಗೆ. ಕೈಗೊಂಡ ನಿರ್ಧಾರದಲ್ಲಿ ಯಶಸ್ಸು. ಆರ್ಥಿಕ ಸ್ಥಿತಿ ಸಮಾಧಾನಕರ.
ಕನ್ಯಾ
ಸಮಸ್ಯೆಯೊಂದು ಮನಃಶಾಂತಿ ಕೆಡಿಸಲಿದೆ. ಅದರ ಪರಿಹಾರವೂ ಕಷ್ಟವೆನಿಸುವುದು. ಆತುರ ಬೇಡ. ಕಾದುನೋಡುವ ತಂತ್ರ ಅನುಸರಿಸಿ. ತುಲಾ
ಅತೃಪ್ತಿ ತರುವ ಕೆಲವು ಬೆಳವಣಿಗೆ ನಡೆದೀತು. ಬಂದುದನ್ನು ಸಮಾಧಾನದಿಂದ ಸ್ವೀಕರಿಸಿ. ದುಡುಕಿನ ವರ್ತನೆ ತೋರದಿರಿ.
ವೃಶ್ಚಿಕ
ಶುಭಕರ ಬೆಳವಣಿಗೆ. ಕ್ಲಿಷ್ಟವಾಗಿದ್ದ ಪರಿಸ್ಥಿತಿ ತಿಳಿಯಾಗಲಿದೆ. ಅನಿರೀಕ್ಷಿತ ದಿಕ್ಕಿನಿಂದ ಬೆಂಬಲ. ಆರ್ಥಿಕ ಉನ್ನತಿ. ಖರ್ಚು ನಿಯಂತ್ರಿಸಿರಿ. ಧನು
ದಿನವಿಡೀ ಏನೇನೋ ಅಡ್ಡಿಗಳು. ಮಹತ್ವದ ಕೆಲಸ ಮುಂದೂಡಿ. ದೊಡ್ಡ ಸಮಸ್ಯೆಗೆ ಸರಳ ಪರಿಹಾರವಿದೆ, ಅತ್ತ ಗಮನ ಹರಿಸಿರಿ. ಮಕರ
ಕೆಲ ಸಮಯದಿಂದ ಕಾಡುತ್ತಿದ್ದ ಸಮಸ್ಯೆಗೆ ಪರಿಹಾರ ಸಿಗಲಿದೆ. ಸೂಕ್ತ ನೆರವೂ ಸಿಗಲಿದೆ. ಯಾರ ಜತೆಗೂ ವಾಗ್ವಾದಕ್ಕೆ ಆಸ್ಪದ ನೀಡಬೇಡಿ.
ಕುಂಭ
ನೆಗೆಟಿವ್ ಚಿಂತನೆ ಬಾಽಸಲಿದೆ. ಸಂಗಾತಿ ಜತೆ ಜಗಳಕ್ಕೆ ಆಸ್ಪದ ನೀಡದಿರಿ. ಹೊಂದಾಣಿಕೆ ಒಳಿತು. ಮಕ್ಕಳ ಸಾಧನೆಯ ತೃಪ್ತಿ.ಖರ್ಚು ಹೆಚ್ಚಳ.
ಮೀನ
ಪ್ರತಿಕೂಲ ಪರಿಸ್ಥಿತಿ ಎದುರಿಸಿದರೂ ಅದನ್ನು ನಿಮ್ಮ ಪರವಾಗಿ ಬದಲಿಸಿಕೊಳ್ಳಿ. ಕೌಟುಂಬಿಕ ಸಾಮರಸ್ಯ ಕೆಡದಂತೆ ನೋಡಿಕೊಳ್ಳಿ.



