August 26, 2026
Wednesday, August 26, 2026
spot_img

ಆಕಸ್ಮಿಕವಾಗಿ ನೀರಿಗೆ ಬಿದ್ರೆ ಬದುಕೋದು ಹೇಗೆ? ಲೈಫ್‌ ಸೇವಿಂಗ್‌ ಟಿಪ್ಸ್‌

ರಾಜ್ಯದಲ್ಲಿ ಇತ್ತೀಚೆಗೆ ನೀರಿನಲ್ಲಿ ಮುಳುಗಿ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಳವಾಗಿದೆ. ಬೇಸಿಗೆಯಿಂದ ನೀರಿಗೆ ಇಳಿಯುವವರ ಸಂಖ್ಯೆಯೂ ಹೆಚ್ಚಿರುವ ಕಾರಣ ಅವಘಡಗಳು ಹೆಚ್ಚಾಗಿ ಸಂಭವಿಸುತ್ತಿವೆ. ನೀರಿನಲ್ಲಿ ಆಕಸ್ಮಿಕವಾಗಿ ಬಿದ್ದಾಗ ಪ್ರಾಣ ಉಳಿಸಿಕೊಳ್ಳಲು ಹೀಗೆ ಮಾಡಿ..

ನೀರಿಗೆ ಬಿದ್ದ ತಕ್ಷಣ ಜನ ಪ್ಯಾನಿಕ್‌ ಆಗುತ್ತಾರೆ. ಒದ್ದಾಡಿ ಒದ್ದಾಡಿ ಶಕ್ತಿ ಕಳೆದುಕೊಳ್ಳುತ್ತಾರೆ. ಆದರೆ ಈ ರೀತಿ ಮಾಡದೇ ಉಸಿರಾಟದ ಬಗ್ಗೆ ಗಮನಹರಿಸಿ. ನಿಧಾನಕ್ಕೆ ಉಸಿರಾಟ ಮಾಡುತ್ತಾ ಇರಿ.

ಉದ್ದುದ್ದ ಇರುವ ನಿಮ್ಮ ದೇಹ ಅಡ್ಡಡ್ಡ ಬರುವಂತೆ ಮಾಡಿಕೊಳ್ಳಿ. ನಿಮ್ಮ ಬೆನ್ನು ನೀರಿನಲ್ಲಿ ಇರಲಿ. ದೇಹ ಆಕಾಶ ನೋಡಲಿ. ಕುತ್ತಿಗೆಯನ್ನು ನೀರಿನಿಂದ ಹೊರಕ್ಕೆ ತರಲು ಪ್ರಯತ್ನ ಮಾಡಿ.

ಮುಳುಗೋದು ಬೇಡ ಎಂದಾದರೆ ನಿಧಾನಕ್ಕೆ ಕೈಯನ್ನು ಹಕ್ಕಿ ರೀತಿ ಬಡಿಯುತ್ತಾ ಇರಿ. ಕಾಲನ್ನು ಸೈಕ್ಲಿಂಗ್‌ ಮಾಡಿ, ಮುಖ ನೀರಿನ ಮೇಲೆ ಇರಲಿ.

ಒಂದು ಕೈಯಲ್ಲಿ ಸ್ವಿಮ್‌ ಮಾಡುವ ಪ್ರಯತ್ನ ಮಾಡುತ್ತಾ ಒಂದು ಕೈಯನ್ನು ಮೇಲೆ ಮಾಡಿ ಸಹಾಯಕ್ಕೆ ಕೂಗಿ. ಕೈಯನ್ನು ಆಡಿಸಿ. ಅದೃಷ್ಟವಿದ್ದರೆ ಯಾರಾದರೂ ಬಂದೇ ಬರುತ್ತಾರೆ.

ನೀರಿನ ಮಧ್ಯೆ ಕಲ್ಲುಬಂಡೆ, ಬಾಲ್‌, ಮರದ ಪೀಸ್‌ ಸಪೋರ್ಟ್‌ಗೆ ಸಿಕ್ಕರೆ ಅದನ್ನು ಹಿಡಿದುಕೊಳ್ಳಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !