ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ತಾಯಿಯಾದ ನಂತರ ಇದೇ ಮೊದಲ ಬಾರಿಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದಾರೆ. ತಾಯಿಯಾದ ನಂತರ, ಗರ್ಭಿಣಿಯಿದ್ದಾಗ ತಾನು ಅನುಭವಿಸಿದ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾ ಕಣ್ಣೀರಿಟ್ಟಿದ್ದಾರೆ.
ಏಳು ತಿಂಗಳ ಗರ್ಭಿಣಿಯಿದ್ದಾಗಲೂ ಕಿಯಾರಾ ಟಾಕ್ಸಿಕ್ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ಕಠಿಣ ಸೀನ್‌ಗಳಲ್ಲಿಯೂ ಭಾಗಿಯಾಗಿದ್ದರು. ಆಕೆ ಗರ್ಭಿಣಿ ಎಂದು ಒಂದಿಬ್ಬರಿಗೆ ಬಿಟ್ಟು ಇನ್ಯಾರಿಗೂ ಗೊತ್ತಿರಲಿಲ್ಲ. ಕ್ಯಾರಾವಾನ್‌ನಲ್ಲಿ ಕುಳಿತು ಮಗುವಿನ ಜೊತೆ ಮಾತನಾಡುತ್ತಾ, ಈಗ ನಡೆದಿದ್ದು ಯಾವುದೂ ನಿಜ ಅಲ್ಲ, ಮಗು ನಾನು ಶೂಟಿಂಗ್ ಮಾಡ್ತಿದ್ದೇನೆ ಅಷ್ಟೆ ಎಂದು ಕಿಯಾರಾ ಹೇಳುತ್ತಿದ್ದರಂತೆ.
ರಾಜ್ ಶಮಾನಿ ಜೊತೆ ಮಾತನಾಡುತ್ತಾ, ತಾಯಿಯಾಗುವ ಮುನ್ನ ನಾನು ಕಂಪ್ಲೀಟ್ ಬೇರೆ ವ್ಯಕ್ತಿ. ನನ್ನಲ್ಲಿ ಇಷ್ಟೊಂದು ಬದಲಾವಣೆಗಳು ಹೇಗೆ ಬಂತು ಅನ್ನೋದೇ ಗೊತ್ತಾಗ್ತಾ ಇಲ್ಲ ಎಂದಿದ್ದಾರೆ.



