ಮನೆಯಲ್ಲಿ ಇರುವ ಮೌತ್‌ವಾಶ್‌ಗೆ ತುಂಬಾನೇ ಪ್ರಾಮುಖ್ಯತೆ ಇದೆ. ಬಾಯಿಗೆ ಹಾಕಿದಾಗ ಖಾರ ಖಾರ ಎನಿಸಿದರೂ ಬಾಯಿಯಲ್ಲಿರುವ ಬ್ಯಾಕ್ಟೀರಿಯಾ ಓಡಿಸೋಕೆ ಇದು ರಾಮಬಾಣದಂತೆ.
ಮೌತ್‌ವಾಶ್ ಯಾಕೆ ಬಳಕೆ ಮಾಡ್ಬೇಕು?
ಎಷ್ಟೇ ನೀಟಾಗಿ ಹಲ್ಲು ಉಜ್ಜಿದರೂ ಬಾಯಿಯ ವಾಸನೆ ಬರುತ್ತಿದೆ ಎಂದಾದರೆ ಮೌತ್‌ವಾಶ್ ಬಳಕೆ ಮಾಡಿ. ಹೆಚ್ಚು ನೀರು ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ.
ಇನ್ನು ಒಸಡಿನ ಸಮಸ್ಯೆ ಇರುವವರು ಕೂಡ ಮೌತ್‌ವಾಶ್ ಬಳಕೆ ಮಾಡಬಹುದು. ನಿತ್ಯದ ಬಳಕೆಯಿಂದ ಸೋಂಕು ಕಡಿಮೆಯಾಗುತ್ತಾ ಹೋಗುತ್ತದೆ.
ಆದರೆ ಕೆಲವರಿಗೆ ಮೌತ್‌ವಾಶ್‌ನಲ್ಲಿರುವ ಆಲ್ಕೋಹಾಲ್ ಕಿರಿಕಿರಿ ಉಂಟು ಮಾಡುತ್ತದೆ. ಬಾಯಿ ಒಣಗುವುದು, ದೀರ್ಘಕಾಲದಲ್ಲಿ ಒಸಡು ನೋವಾಗುತ್ತದೆ. ಗರ್ಭಿಣಿಯರು ಇದನ್ನು ಬಳಸುವಂತೆ ಇಲ್ಲ.



