ರಾತ್ರಿ ಮಲಗುವ ಮುನ್ನ ಹಲವರಿಗೆ ನಿಧಾನವಾದ ಸಂಗೀತ ಕೇಳುವ ಅಭ್ಯಾಸ ಇರುತ್ತದೆ. ಕೆಲವರಿಗೆ ಅದು ಮನಸ್ಸಿಗೆ ಶಾಂತಿ ಕೊಟ್ಟರೆ, ಇನ್ನೂ ಕೆಲವರಿಗೆ ಸಂಗೀತ ಇಲ್ಲದೆ ನಿದ್ರೆಯೇ ಬರುವುದಿಲ್ಲ. ಹಾಗಾದರೆ ನಿಜಕ್ಕೂ ಸಂಗೀತ ಕೇಳುತ್ತಾ ಮಲಗಿದರೆ ನಿದ್ರೆ ಗುಣಮಟ್ಟ ಹೆಚ್ಚುತ್ತದೆಯೇ ಎಂಬ ಪ್ರಶ್ನೆ ಹಲವರಲ್ಲಿದೆ.
ತಜ್ಞರ ಪ್ರಕಾರ, ಮೃದುವಾದ ಸಂಗೀತ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು. ದಿನವಿಡೀ ಕೆಲಸ, ಒತ್ತಡ ಮತ್ತು ಆಲೋಚನೆಗಳಿಂದ ಮೆದುಳು ಚುರುಕಾಗಿರುತ್ತದೆ. ಇಂತಹ ಸಮಯದಲ್ಲಿ ನಿಧಾನ ಲಯದ ಸಂಗೀತ ಕೇಳಿದರೆ ಮನಸ್ಸು ಶಾಂತವಾಗಿ, ದೇಹವೂ ವಿಶ್ರಾಂತ ಸ್ಥಿತಿಗೆ ಬರಲು ನೆರವಾಗಬಹುದು.
ಇದನ್ನೂ ಓದಿ:
ಆದರೆ ಎಲ್ಲ ಸಂಗೀತವೂ ನಿದ್ರೆಗೆ ಒಳ್ಳೆಯದಲ್ಲ. ಜೋರಾದ ಧ್ವನಿ, ವೇಗದ ಬೀಟ್ ಅಥವಾ ಹೆಚ್ಚು ಉದ್ವೇಗ ಹುಟ್ಟಿಸುವ ಹಾಡುಗಳು ಮೆದುಳನ್ನು ಇನ್ನಷ್ಟು ಚುರುಕುಗೊಳಿಸಬಹುದು. ಇದರಿಂದ ನಿದ್ರೆ ಬರಲು ವಿಳಂಬವಾಗಬಹುದು.
ಹೀಗಾಗಿ ಮಲಗುವ ಮುನ್ನ ಮೃದುವಾದ, ಶಾಂತ ಲಯದ ಸಂಗೀತವನ್ನು ಕಡಿಮೆ ಧ್ವನಿಯಲ್ಲಿ ಕೇಳುವುದು ಉತ್ತಮ. ಸರಿಯಾದ ರೀತಿಯಲ್ಲಿ ಕೇಳಿದರೆ ಸಂಗೀತ ನಿದ್ರೆಗೆ ಒಳ್ಳೆಯ ಸ್ನೇಹಿತನಾಗಬಹುದು.



