ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲ ದಿನಗಳ ಇಳಿಕೆಯ ನಂತರ ಚಿನ್ನದ ದರ ಮತ್ತೆ ಏರಿಕೆ ಕಂಡಿದೆ. ಮಂಗಳವಾರ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಗ್ರಾಂಗೆ ಸುಮಾರು 170 ರೂ ಏರಿಕೆಯಾಗಿ ಹೂಡಿಕೆದಾರರು ಹಾಗೂ ಗ್ರಾಹಕರ ಗಮನ ಸೆಳೆದಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬದಲಾವಣೆ ಮತ್ತು ಬೇಡಿಕೆಯ ಹೆಚ್ಚಳವೇ ಈ ಏರಿಕೆಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ. ಬೆಳ್ಳಿ ದರವೂ ಗ್ರಾಂಗೆ 15 ರೂ ಏರಿಕೆಯೊಂದಿಗೆ ಚುರುಕು ಕಂಡಿದೆ.
ಇದನ್ನೂ ಓದಿ:
ಭಾರತದಲ್ಲಿ ಪ್ರಸ್ತುತ 22 ಕ್ಯಾರಟ್ ಚಿನ್ನದ ದರ 10 ಗ್ರಾಂಗೆ ಸುಮಾರು 1,41,150 ರೂ ಹಾಗೂ 24 ಕ್ಯಾರಟ್ ಅಪರಂಜಿ ಚಿನ್ನದ ದರ 1,53,980 ರೂ ಮಟ್ಟದಲ್ಲಿ ಇದೆ. ಬೆಳ್ಳಿ 100 ಗ್ರಾಂಗೆ ಸುಮಾರು 29,000ಕ್ಕೆ ಮಾರಾಟವಾಗುತ್ತಿದೆ. ಇತರ ನಗರಗಳಲ್ಲಿ ದರಗಳಲ್ಲಿ ಸಣ್ಣ ವ್ಯತ್ಯಾಸ ಕಂಡುಬಂದಿದೆ.
ವಿದೇಶಗಳಲ್ಲಿ ದುಬೈ, ಸಿಂಗಾಪುರ, ಅಮೆರಿಕ ಮತ್ತು ಕತಾರ್ ಸೇರಿದಂತೆ ಹಲವು ದೇಶಗಳಲ್ಲಿ ಚಿನ್ನದ ಬೆಲೆ ಭಾರತೀಯ ಮೌಲ್ಯಕ್ಕೆ ಸಮಾನವಾಗಿ ಮುಂದುವರಿದಿದೆ.ಮಾರುಕಟ್ಟೆ ತಜ್ಞರ ಪ್ರಕಾರ, ಜಾಗತಿಕ ಆರ್ಥಿಕ ಅನಿಶ್ಚಿತತೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.



