September 11, 2026
Friday, September 11, 2026
spot_img

ಪಂಜಾಬ್ ವಿರುದ್ಧ ಗೆದ್ದ ಖುಷಿಯಲ್ಲಿದ್ದ ಅಕ್ಷರ್ ಪಟೇಲ್‌ಗೆ ಶಾಕ್: ಸ್ಲೋ ಓವರ್ ಗೆ ಬಿತ್ತು ದಂಡದ ಬರೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಟೂರ್ನಿಯಲ್ಲಿ ಈ ಬಾರಿ ಪ್ರತಿ ಪಂದ್ಯದಲ್ಲೂ ಒಬ್ಬರ ಮೇಲಾದರೂ ದಂಡದ ಬರೆ ಬಿಳುತ್ತಲ್ಲೇ ಇದೆ. ಇದೀಗ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆಲುವು ಸಾಧಿಸಿದಾದರೂ, ನಾಯಕ ಅಕ್ಷರ್ ಪಟೇಲ್‌ಗೆ ಭಾರೀ ಮೊತ್ತದ ದಂಡದ ಬಿಸಿ ಮುಟ್ಟಿದೆ.

ಪಂದ್ಯದ ವೇಳೆ ನಿಗದಿತ ಸಮಯಕ್ಕೆ ಓವರ್‌ಗಳನ್ನು ಪೂರ್ಣಗೊಳಿಸದ ಕಾರಣ ಅಕ್ಷರ್ ಪಟೇಲ್‌ಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

ಐಪಿಎಲ್ ನಿಯಮ ಪ್ರಕಾರ, ಪ್ರತಿ ತಂಡಗಳು 20 ಓವರ್​ಗಳನ್ನು 1 ಗಂಟೆ 30 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕು. ಇದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡರೆ ಬೌಂಡರಿ ಲೈನ್​ನಿಂದ ಒಬ್ಬ ಫೀಲ್ಡರ್​ನನ್ನು ಕಡಿಮೆ ಮಾಡಲಾಗುತ್ತದೆ. ಜೊತೆಗೆ ತಂಡದ ನಾಯಕನಿಗೆ ಪಂದ್ಯದ ಬಳಿಕ 12 ಲಕ್ಷ ರೂ., ದಂಡ ವಿಧಿಸಲಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !