ಮೇಷ
ಮನೆಯಲ್ಲಿ ವಾಗ್ಯುದ್ಧ ನಡೆದೀತು. ಮಾತಿಗೆ ಮಾತು ಕೂಡಿಸಬೇಡಿ. ಅನಿರೀಕ್ಷಿತ ಖರ್ಚು ಒದಗಲಿದೆ. ಖರೀದಿ ಕಡಿಮೆ ಮಾಡಿ.
ವೃಷಭ
ಕೆಲಸದ ಒತ್ತಡ ಹೆಚ್ಚು. ಕೆಲಸದ ಗುಣಮಟ್ಟ ಹೆಚ್ಚಿಸಲು ಆದ್ಯತೆ ಕೊಡಿ. ಆಪ್ತರ ಜತೆ ಮನಬಿಚ್ಚಿ ಮಾತನಾಡಿ. ಮುಚ್ಚುಮರೆ ಬೇಡ. ಮಿಥುನ
ಸುಗಮ ಕಾರ್ಯ. ಗುರಿ ಈಡೇರಿಕೆ. ಕೌಟುಂಬಿಕ ಬದ್ಧತೆ ಈಡೇರಿಸಿ. ಕೆಲಸ ಬಾಕಿ ಇಡಬೇಡಿ. ಹಣ ಗಳಿಕೆ ತೃಪ್ತಿ ತರಲಿದೆ.
ಕಟಕ
ಮನೆಯಲ್ಲಿ ತಾಳ್ಮೆಯಿಂದ ವ್ಯವಹರಿಸಿ. ಜಗಳಕ್ಕೆ ಆಸ್ಪದ ನೀಡದಿರಿ. ಹೆಚ್ಚುವರಿ ಖರ್ಚು. ನಿಮ್ಮ ನಿರ್ಧಾರ ಉತ್ತಮ ಫಲ
ನೀಡದಿರಬಹುದು.
ಸಿಂಹ
ಕೆಲವಾರು ವಿಷಯದತ್ತ ಏಕಕಾಲದಲ್ಲಿ ಗಮನ ಹರಿಸಬೇಕಾದ ಒತ್ತಡ. ಆರ್ಥಿಕ ಪ್ರಗತಿ ಕುಂಠಿತ. ಕೆಲವರಿಗೆ ಕಾಲು ನೋವು ಬಾಧಿಸಬಹುದು.
ಕನ್ಯಾ
ಉತ್ಸಾಹದ ದಿನ. ವೃತ್ತಿಯಲ್ಲಿ ಹೊಸ ಅವಕಾಶ ಪ್ರಾಪ್ತಿ. ವಿವಾಹಿತ ದಂಪತಿಗೆ ಶುಭ ಸುದ್ದಿ. ಆತ್ಮೀಯರ ಜತೆಗೆ ಮನಸ್ತಾಪ ಮಾಡದಿರಿ. ತುಲಾ
ಹೊಣೆಗಾರಿಕೆ ಸಕಾಲದಲ್ಲಿ ಪೂರೈಸುವಿರಿ. ಆದಾಯ ಏರಿಕೆ. ಸಣ್ಣ ಚಿಂತೆಗೆ ಕಾರಣವಾಗಿದ್ದ ವಿಷಯ ಇತ್ಯರ್ಥ. ಬಂಧುಗಳ ಸಹಕಾರ. ವೃಶ್ಚಿಕ
ಇಚ್ಛಿತ ಕಾರ್ಯ ನಿಧಾನವಾಗಲಿದೆ. ಅದರಿಂದ ಅಸಹನೆ. ವ್ಯವಹಾರದಲ್ಲಿ ಹಣ ಹೂಡಿಕೆ ಲಾಭ ತರಲಿದೆ. ಖರ್ಚು ಅಽಕ.
ಧನು
ನಿಮ್ಮ ದುಡಿಮೆಗೆ ತಕ್ಕ ಫಲ. ಘನತೆ ಹೆಚ್ಚಳ. ನಿಮ್ಮ ನಡೆನುಡಿ ಎಲ್ಲರ ಮೆಚ್ಚುಗೆ ಗಳಿಸಲಿದೆ. ಆದಾಯ ಏರಿಕೆ. ಕೌಟುಂಬಿಕ ಅಶಾಂತಿ ನಿವಾರಣೆ.
ಮಕರ
ಎಂದಿಗಿಂತ ಹೆಚ್ಚು ಹೊಣೆ. ಕೆಲವರ ಅಸಹಕಾರ. ಹಣದ ತೊಡಕು ಕಾಡಲಿದೆ. ಊಟ ಸಕಾಲದಲ್ಲಿ ಮಾಡಿ. ಆರೋಗ್ಯಕ್ಕೆ ಗಮನ ಕೊಡಿ. ಕುಂಭ
ವೃತ್ತಿಯಲ್ಲಿನ ಒತ್ತಡ ನಿಭಾಯಿಸಲು ಸ-ಲ. ಸಂಗಾತಿ ಜತೆ ಉತ್ತಮ ಹೊಂದಾಣಿಕೆ. ಆರೋಗ್ಯ ಸಮಸ್ಯೆ ಪರಿಹಾರ. ಮಾನಸಿಕ ನಿರಾಳತೆ. ಮೀನ
ಕೆಲಸದ ಒತ್ತಡ ಕಡಿಮೆ ಮಾಡುವ ಅವಕಾಶ ಸಿಗಲಿದೆ. ಮನೆಯಲ್ಲಿ ಸೌಹಾರ್ದ ವಾತಾವರಣ. ಹಣ ಹೂಡಿಕೆಯಿಂದ ಲಾಭ.



