ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರ ಯುಎಇ ಪ್ರವಾಸಕ್ಕೆ ಅದ್ದೂರಿ ಸ್ವಾಗತ ದೊರೆತಿದೆ.
ಅಬುಧಾಬಿಗೆ ಆಗಮಿಸಿದ ಮೋದಿ ಅವರ ವಿಶೇಷ ವಿಮಾನಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್ ತನ್ನ ಅತ್ಯಾಧುನಿಕ ಫೈಟರ್ ಜೆಟ್‌ಗಳನ್ನು ಬೆಂಗಾವಲಾಗಿ ಕಳುಹಿಸಿ ವಿಶೇಷ ಗೌರವ ಸಲ್ಲಿಸಿದೆ. ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಐದು ರಾಷ್ಟ್ರಗಳ ವಿದೇಶಿ ಪ್ರವಾಸದ ಮೊದಲ ಹಂತವಾಗಿ ಪ್ರಧಾನಿ ಮೋದಿ ಯುಎಇಗೆ ಭೇಟಿ ನೀಡಿದ್ದಾರೆ. ಬಳಿಕ ಅವರು ನೆದರ್ಲ್ಯಾಂಡ್ಸ್, ಸ್ವೀಡನ್, ನಾರ್ವೆ ಹಾಗೂ ಇಟಲಿ ದೇಶಗಳಿಗೆ ಪ್ರಯಾಣ ಬೆಳೆಸಲಿದ್ದಾರೆ. ಮೋದಿ ಅವರ ಈ ಪ್ರವಾಸಕ್ಕೆ ಜಾಗತಿಕ ಮಟ್ಟದಲ್ಲಿ ಮಹತ್ವ ಸಿಕ್ಕಿದೆ.
ಇದನ್ನೂ ಓದಿ:
ಯುಎಇ ವಾಯುಪಡೆಯ ಎಫ್-16 ಬ್ಲಾಕ್ 60 ‘ಡೆಸರ್ಟ್ ಫಾಲ್ಕನ್’ ಯುದ್ಧ ವಿಮಾನಗಳು, ಪ್ರಧಾನಿ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ಒನ್ ಬೋಯಿಂಗ್ 777-300ER ವಿಮಾನಕ್ಕೆ ಎಸ್ಕಾರ್ಟ್ ನೀಡಿದವು. ವಿಮಾನ ಯುಎಇ ವಾಯುಪ್ರದೇಶ ಪ್ರವೇಶಿಸುತ್ತಿದ್ದಂತೆಯೇ ಫೈಟರ್ ಜೆಟ್‌ಗಳು ಜೊತೆಯಾಗಿ ಹಾರಿದ ದೃಶ್ಯ ಗಮನಸೆಳೆಯಿತು.
ದೆಹಲಿ ಮತ್ತು ಅಬುಧಾಬಿ ನಡುವಿನ ಬಲವಾದ ಸಂಬಂಧದ ಸಂಕೇತವಾಗಿ ಈ ಗೌರವವನ್ನು ಯುಎಇ ವಿವರಿಸಿದೆ. ಇದೇ ಎಫ್-16 ಯುದ್ಧ ವಿಮಾನಗಳನ್ನು ಹಿಂದೆ ಇರಾನ್‌ನ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳನ್ನು ತಡೆಹಿಡಿಯಲು ಬಳಸಲಾಗಿತ್ತು ಎನ್ನಲಾಗಿದೆ.



