May 16, 2026
Saturday, May 16, 2026
spot_img

‘ಇರಾನ್ ಮೇಲೆ ಅಣುಬಾಂಬ್ ಹಾಕುವನಾ?’: ಹೀಗಂತ ಟ್ರಂಪ್ ಹೇಳಿದ್ರಂತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇರಾನ್-ಅಮೆರಿಕ ನಡುವಿನ ಉದ್ವಿಗ್ನತೆ ತಾರಕಕ್ಕೇರುತ್ತಿರುವ ನಡುವೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕುರಿತು ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ.

ಇರಾನ್ ವಿರುದ್ಧ ಪರಮಾಣು ಶಸ್ತ್ರಾಸ್ತ್ರ ಬಳಕೆ ಸಾಧ್ಯತೆಯ ಬಗ್ಗೆ ಟ್ರಂಪ್ ಚರ್ಚೆ ನಡೆಸಿದ್ದರು ಎಂದು ಸಿಐಎ ಮಾಜಿ ವಿಶ್ಲೇಷಕ ಲ್ಯಾರಿ ಜಾನ್ಸನ್ ಹೇಳಿದ್ದಾರೆ.

ಯುದ್ಧ ಪರಿಸ್ಥಿತಿ ಕುರಿತು ಮಾತನಾಡಿದ ಲ್ಯಾರಿ ಜಾನ್ಸನ್, ಟ್ರಂಪ್ ಟೆಹ್ರಾನ್ ಮೇಲೆ ಅಣುಬಾಂಬ್ ದಾಳಿ ಮಾಡುವ ಸಾಧ್ಯತೆ ಬಗ್ಗೆ ಅಮೆರಿಕದ ರಕ್ಷಣಾ ಪಡೆಗಳ ಜಂಟಿ ಮುಖ್ಯಸ್ಥ ಡಾನ್ ಕೇನ್ ಅವರೊಂದಿಗೆ ಚರ್ಚೆ ನಡೆಸಿದ್ದರು ಎಂದು ಬಹಿರಂಗಪಡಿಸಿದ್ದಾರೆ. ಆದರೆ ಡಾನ್ ಕೇನ್ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರಂತೆ.

ಇದನ್ನೂ ಓದಿ:

“ಪರಮಾಣು ಶಸ್ತ್ರಾಸ್ತ್ರ ಬಳಕೆ ಬಗ್ಗೆ ಗಂಭೀರ ಚರ್ಚೆ ನಡೆದಿತ್ತು. ಆದರೆ ಜನರಲ್ ಕೇನ್ ಸ್ಪಷ್ಟವಾಗಿ ‘ಇಲ್ಲ’ ಎಂದು ಹೇಳಿದ್ದರು. ಅದಾದ ಬಳಿಕ ಟ್ರಂಪ್ ಕೂಡ ಅಣುಬಾಂಬ್ ಬಳಕೆ ಮಾಡುವುದಿಲ್ಲ ಎಂದು ಹೇಳಲು ಆರಂಭಿಸಿದರು” ಎಂದು ಜಾನ್ಸನ್ ತಿಳಿಸಿದ್ದಾರೆ.

ಅಮೆರಿಕ ಅಧ್ಯಕ್ಷರಿಗೆ ಪರಮಾಣು ದಾಳಿಗೆ ಆದೇಶಿಸುವ ಅಧಿಕಾರ ಇದ್ದರೂ, ಅದನ್ನು ಜಾರಿಗೊಳಿಸುವ ಕುರಿತು ಅಂತಿಮ ನಿರ್ಧಾರ ಸೇನಾ ಮುಖ್ಯಸ್ಥರ ಪಾತ್ರದಲ್ಲೂ ಇರುತ್ತದೆ ಎಂದು ಜಾನ್ಸನ್ ವಿವರಿಸಿದ್ದಾರೆ. ಈ ಹೇಳಿಕೆ ಇದೀಗ ಜಾಗತಿಕ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !