May 16, 2026
Saturday, May 16, 2026
spot_img

Health Tips | ಊಟ ಮಾಡುವ ಸ್ಟೈಲ್‌ನಲ್ಲೇ ಅಡಗಿದೆ ಆರೋಗ್ಯದ ರಹಸ್ಯ! ಸರಿಯಾದ ವಿಧಾನ ಗೊತ್ತಿದೆಯಾ?

ನಾವು ಏನು ತಿನ್ನುತ್ತೇವೆ ಅನ್ನೋದಕ್ಕಿಂತ, ಹೇಗೆ ತಿನ್ನುತ್ತೇವೆ ಅನ್ನೋದು ಕೂಡ ಆರೋಗ್ಯಕ್ಕೆ ಬಹಳ ಮುಖ್ಯ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಇತ್ತೀಚಿನ ಜೀವನಶೈಲಿಯಲ್ಲಿ ತುರ್ತುತುರ್ತಾಗಿ ಊಟ ಮಾಡುವ ಅಭ್ಯಾಸ ಜೀರ್ಣಕ್ರಿಯೆ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಸರಿಯಾದ ರೀತಿಯಲ್ಲಿ ಆಹಾರ ಸೇವಿಸಿದರೆ ಮಾತ್ರ ದೇಹಕ್ಕೆ ಅಗತ್ಯ ಪೌಷ್ಟಿಕಾಂಶಗಳು ಸರಿಯಾಗಿ ಸಿಗುತ್ತವೆ.

ತಜ್ಞರ ಪ್ರಕಾರ, ಊಟ ಮಾಡುವಾಗ ಆಹಾರವನ್ನು ನಿಧಾನವಾಗಿ ಚೆನ್ನಾಗಿ ಜಗಿದು ತಿನ್ನಬೇಕು. ಹೀಗೆ ಮಾಡಿದರೆ ಜೀರ್ಣಕ್ರಿಯೆ ಸುಲಭವಾಗುವುದರ ಜೊತೆಗೆ ಹೊಟ್ಟೆ ಉಬ್ಬರ, ಗ್ಯಾಸ್ ಹಾಗೂ ಅಜೀರ್ಣ ಸಮಸ್ಯೆಗಳು ಕಡಿಮೆಯಾಗುತ್ತವೆ. ವೇಗವಾಗಿ ಊಟ ಮಾಡುವುದರಿಂದ ದೇಹಕ್ಕೆ ತೃಪ್ತಿ ಸಿಗದೆ ಹೆಚ್ಚು ಆಹಾರ ಸೇವಿಸುವ ಸಾಧ್ಯತೆಯೂ ಇರುತ್ತದೆ.

ಇದನ್ನೂ ಓದಿ:

ಮೊಬೈಲ್, ಟಿವಿ ನೋಡುತ್ತಾ ಊಟ ಮಾಡುವ ಅಭ್ಯಾಸವೂ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ವೈದ್ಯರು ಎಚ್ಚರಿಸುತ್ತಾರೆ. ಶಾಂತ ಮನಸ್ಸಿನಿಂದ ಕುಳಿತು ಊಟ ಮಾಡಿದರೆ ದೇಹ ಮತ್ತು ಮೆದುಳು ಆಹಾರವನ್ನು ಸರಿಯಾಗಿ ಸ್ವೀಕರಿಸುತ್ತವೆ.

ಅದೇ ರೀತಿ ನಿಗದಿತ ಸಮಯಕ್ಕೆ ಊಟ ಮಾಡುವ ಅಭ್ಯಾಸ ಬೆಳೆಸಿಕೊಳ್ಳುವುದು ಮುಖ್ಯ. ಸರಿಯಾದ ಆಹಾರ ಪದ್ಧತಿ ಮತ್ತು ಜೀರ್ಣಕ್ರಿಯೆ ಉತ್ತಮವಾಗಿದ್ದರೆ ದೇಹವೂ ಆರೋಗ್ಯವಾಗಿರುತ್ತದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !