ರಾತ್ರಿ ಹೊತ್ತಿಗೆ ಹಗುರವಾದ, ಸುಲಭವಾಗಿ ಜೀರ್ಣವಾಗುವ ಮತ್ತು ಆರೋಗ್ಯಕರ ಆಹಾರ ಬೇಕೆಂದರೆ ಕ್ಯಾರೆಟ್ ಸೂಪ್ ಬೆಸ್ಟ್. ಇದು ವಿಟಮಿನ್ A, ಫೈಬರ್ ಹಾಗೂ ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿದ್ದು, ತೂಕ ಇಳಿಸಿಕೊಳ್ಳುವವರಿಗೆ ಸಹ ಸೂಕ್ತವಾದ ಡಿನ್ನರ್ ರೆಸಿಪಿ.
ಬೇಕಾಗುವ ಪದಾರ್ಥಗಳು
ಕ್ಯಾರೆಟ್ – 4 ರಿಂದ 5 (ಸಣ್ಣದಾಗಿ ಕತ್ತರಿಸಿದ್ದು)
ಈರುಳ್ಳಿ – 1/2
ಬೆಳ್ಳುಳ್ಳಿ – 2 ಎಸಳು
ಶುಂಠಿ – 1 ಇಂಚು
ಬೆಣ್ಣೆ ಅಥವಾ ಆಲಿವ್ ಎಣ್ಣೆ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಕಾಳುಮೆಣಸಿನ ಪುಡಿ – 1/2 ಚಮಚ
ನೀರು – 2 ರಿಂದ 3 ಕಪ್
ಕೊತ್ತಂಬರಿ ಸೊಪ್ಪು – ಸ್ವಲ್ಪ
ಮಾಡುವ ವಿಧಾನ
ಮೊದಲು ಕುಕ್ಕರ್ ಅಥವಾ ಪಾತ್ರೆಯಲ್ಲಿ ಬೆಣ್ಣೆ ಬಿಸಿ ಮಾಡಿ. ನಂತರ ಬೆಳ್ಳುಳ್ಳಿ, ಶುಂಠಿ ಮತ್ತು ಈರುಳ್ಳಿ ಹಾಕಿ ಸ್ವಲ್ಪ ಹುರಿಯಿರಿ. ಇದಕ್ಕೆ ಕ್ಯಾರೆಟ್ ಸೇರಿಸಿ 2 ನಿಮಿಷ ಬಾಡಿಸಿ.
ಈಗ ನೀರು ಮತ್ತು ಸ್ವಲ್ಪ ಉಪ್ಪು ಸೇರಿಸಿ 3 ಸೀಟಿ ಬರುವವರೆಗೆ ಬೇಯಿಸಿ. ತಣ್ಣಗಾದ ಬಳಿಕ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ.
ಮತ್ತೆ ಪಾತ್ರೆಗೆ ಸುರಿದು ಅಗತ್ಯವಿದ್ದರೆ ನೀರು ಸೇರಿಸಿ 2 ನಿಮಿಷ ಕುದಿಸಿ. ಕೊನೆಯಲ್ಲಿ ಕಾಳುಮೆಣಸಿನ ಪುಡಿ ಹಾಕಿ ಚೆನ್ನಾಗಿ ಕಲಸಿ.
ಬಿಸಿ ಬಿಸಿ ಕ್ಯಾರೆಟ್ ಸೂಪ್ ಮೇಲೆ ಕೊತ್ತಂಬರಿ ಸೊಪ್ಪು ಹಾಕಿ ಸವಿದರೆ ರುಚಿ ಮತ್ತಷ್ಟು ಹೆಚ್ಚುತ್ತದೆ. ಇದು ಲೈಟ್ ಡಿನ್ನರ್‌ಗೆ ಪರ್ಫೆಕ್ಟ್ ಆಯ್ಕೆ.



