June 27, 2026
Saturday, June 27, 2026
spot_img

Soup | ಲೈಟ್ ಡಿನ್ನರ್‌ಗೆ ಟ್ರೈ ಮಾಡಿ ಹೆಲ್ತಿ ಕ್ಯಾರೆಟ್ ಸೂಪ್

ರಾತ್ರಿ ಹೊತ್ತಿಗೆ ಹಗುರವಾದ, ಸುಲಭವಾಗಿ ಜೀರ್ಣವಾಗುವ ಮತ್ತು ಆರೋಗ್ಯಕರ ಆಹಾರ ಬೇಕೆಂದರೆ ಕ್ಯಾರೆಟ್ ಸೂಪ್ ಬೆಸ್ಟ್. ಇದು ವಿಟಮಿನ್ A, ಫೈಬರ್ ಹಾಗೂ ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿದ್ದು, ತೂಕ ಇಳಿಸಿಕೊಳ್ಳುವವರಿಗೆ ಸಹ ಸೂಕ್ತವಾದ ಡಿನ್ನರ್ ರೆಸಿಪಿ.

ಬೇಕಾಗುವ ಪದಾರ್ಥಗಳು

ಕ್ಯಾರೆಟ್ – 4 ರಿಂದ 5 (ಸಣ್ಣದಾಗಿ ಕತ್ತರಿಸಿದ್ದು)
ಈರುಳ್ಳಿ – 1/2
ಬೆಳ್ಳುಳ್ಳಿ – 2 ಎಸಳು
ಶುಂಠಿ – 1 ಇಂಚು
ಬೆಣ್ಣೆ ಅಥವಾ ಆಲಿವ್ ಎಣ್ಣೆ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಕಾಳುಮೆಣಸಿನ ಪುಡಿ – 1/2 ಚಮಚ
ನೀರು – 2 ರಿಂದ 3 ಕಪ್
ಕೊತ್ತಂಬರಿ ಸೊಪ್ಪು – ಸ್ವಲ್ಪ

ಮಾಡುವ ವಿಧಾನ

ಮೊದಲು ಕುಕ್ಕರ್ ಅಥವಾ ಪಾತ್ರೆಯಲ್ಲಿ ಬೆಣ್ಣೆ ಬಿಸಿ ಮಾಡಿ. ನಂತರ ಬೆಳ್ಳುಳ್ಳಿ, ಶುಂಠಿ ಮತ್ತು ಈರುಳ್ಳಿ ಹಾಕಿ ಸ್ವಲ್ಪ ಹುರಿಯಿರಿ. ಇದಕ್ಕೆ ಕ್ಯಾರೆಟ್ ಸೇರಿಸಿ 2 ನಿಮಿಷ ಬಾಡಿಸಿ.

ಈಗ ನೀರು ಮತ್ತು ಸ್ವಲ್ಪ ಉಪ್ಪು ಸೇರಿಸಿ 3 ಸೀಟಿ ಬರುವವರೆಗೆ ಬೇಯಿಸಿ. ತಣ್ಣಗಾದ ಬಳಿಕ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ.

ಮತ್ತೆ ಪಾತ್ರೆಗೆ ಸುರಿದು ಅಗತ್ಯವಿದ್ದರೆ ನೀರು ಸೇರಿಸಿ 2 ನಿಮಿಷ ಕುದಿಸಿ. ಕೊನೆಯಲ್ಲಿ ಕಾಳುಮೆಣಸಿನ ಪುಡಿ ಹಾಕಿ ಚೆನ್ನಾಗಿ ಕಲಸಿ.

ಬಿಸಿ ಬಿಸಿ ಕ್ಯಾರೆಟ್ ಸೂಪ್ ಮೇಲೆ ಕೊತ್ತಂಬರಿ ಸೊಪ್ಪು ಹಾಕಿ ಸವಿದರೆ ರುಚಿ ಮತ್ತಷ್ಟು ಹೆಚ್ಚುತ್ತದೆ. ಇದು ಲೈಟ್ ಡಿನ್ನರ್‌ಗೆ ಪರ್ಫೆಕ್ಟ್ ಆಯ್ಕೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !