May 17, 2026
Sunday, May 17, 2026
spot_img

ಶ್ರೀಲೀಲಾ-ತಿಲಕ್ ವರ್ಮಾ ನಡುವೆ ಏನಿದು ಕುಚ್-ಕುಚ್? ವೈರಲ್ ಗಾಸಿಪ್‌ಗೆ ಕಾರಣವಾಯ್ತಾ ಆ ಒಂದು ಫೋಟೋ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಭಾರತದಿಂದ ಬಾಲಿವುಡ್‌ವರೆಗೂ ಭರ್ಜರಿ ಬೇಡಿಕೆ ಹೊಂದಿರುವ ನಟಿ ಶ್ರೀಲೀಲಾ ಇದೀಗ ಹೊಸ ಗಾಸಿಪ್‌ನಿಂದ ಸದ್ದು ಮಾಡುತ್ತಿದ್ದಾರೆ. ಕನ್ನಡ ಮೂಲದ ಈ ನಟಿಯ ಹೆಸರು ಇದೀಗ ಯುವ ಕ್ರಿಕೆಟಿಗ ತಿಲಕ್ ವರ್ಮಾ ಜೊತೆ ಜೋಡಿಯಾಗಿ ಕೇಳಿಬರುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿದೆ.

ಮುಂಬೈ ಇಂಡಿಯನ್ಸ್ ತಂಡದ ಪಂದ್ಯವೊಂದರ ವೇಳೆ ಶ್ರೀಲೀಲಾ ತಾಯಿ ಫ್ಯಾಮಿಲಿ ಬಾಕ್ಸ್‌ನಲ್ಲಿ ಕಾಣಿಸಿಕೊಂಡದ್ದು ಈ ಸುದ್ದಿಗೆ ಕಾರಣವಾಗಿದೆ. ಆಟಗಾರರ ಕುಟುಂಬ ಸದಸ್ಯರ ನಡುವೆ ಅವರು ಕುಳಿತಿದ್ದ ದೃಶ್ಯ ವೈರಲ್ ಆದ ಬಳಿಕ, ಶ್ರೀಲೀಲಾ ಮತ್ತು ತಿಲಕ್ ವರ್ಮಾ ನಡುವೆ ವಿಶೇಷ ಸ್ನೇಹ ಇದೆ ಎಂಬ ಮಾತುಗಳು ಹರಿದಾಡಲು ಆರಂಭವಾಗಿದೆ.

ಇದನ್ನೂ ಓದಿ:

ಆದರೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡ ಯಾವುದೇ ಫೋಟೋ ಅಥವಾ ಅಧಿಕೃತ ಮಾಹಿತಿ ಇನ್ನೂ ಹೊರಬಂದಿಲ್ಲ. ಕೇವಲ ಒಂದು ಘಟನೆ ಆಧರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಊಹಾಪೋಹಗಳು ಹರಿದಾಡುತ್ತಿವೆ.

ಸದ್ಯ ಶ್ರೀಲೀಲಾ ತಮ್ಮ ಸಿನಿಮಾ ಕರಿಯರ್‌ನಲ್ಲಿ ಬ್ಯುಸಿಯಾಗಿದ್ದು, ಹಲವು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಯಾವುದೇ ವಿವಾದಗಳಿಂದ ದೂರವಿರುವ ಅವರು, ತಮ್ಮ ಕೆಲಸದ ಮೂಲಕವೇ ಹೆಚ್ಚು ಗಮನ ಸೆಳೆಯುತ್ತಿದ್ದಾರೆ.

ಇದಕ್ಕೂ ಮೊದಲು ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಜೊತೆಗೂ ಶ್ರೀಲೀಲಾ ಹೆಸರು ಕೇಳಿಬಂದಿತ್ತು. ಆದರೆ ಆ ಗಾಸಿಪ್‌ಗಳಿಗೆ ನಂತರ ಸ್ಪಷ್ಟನೆ ಸಿಕ್ಕಿತ್ತು. ಇದೀಗ ಮತ್ತೆ ಹೊಸ ಚರ್ಚೆ ಶುರುವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !