July 25, 2026
Saturday, July 25, 2026
spot_img

ಮಕ್ಕಳಿಗೆ ತಿಲಕ, ಕೇಸರಿ ಶಾಲ್ ಹಾಕಿ ಶಾಲೆಗೆ ಕಳಿಸಿ: ಸರ್ಕಾರದ ನಿರ್ಧಾರಕ್ಕೆ ಯತ್ನಾಳ್ ಟಕ್ಕರ್!

ಹೊಸದಿಗಂತ ವರದಿ ವಿಜಯಪುರ:

ಜೂನ್ ನಲ್ಲಿ ಶಾಲೆ ಪ್ರಾರಂಭ ಆಗುತ್ತಿದ್ದಂತೆ ಪ್ರತಿಯೊಬ್ಬರಿಗೂ ಕೇಸರಿ ಶಾಲು ವಿತರಣೆ ಮಾಡುತ್ತೇನೆ‌ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.

ಹಿಜಾಬ್ – ಕೇಸರಿ ಶಾಲು ವಿವಾದ ವಿಚಾರಕ್ಕೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಕೇಸರಿ ಶಾಲು ಹಾಕಿಕೊಳ್ಳಲು ನಿಷೇಧ ಹೇರಲು ಇವರಿಗೆ ಯಾರು ಅಧಿಕಾರ ಕೊಟ್ಟವರು. ಕೇಸರಿ ಶಾಲು ಹಾಕೋದು ನಮ್ಮ ಹಕ್ಕು, ನಮ್ಮ ಧರ್ಮ ಇದೆ ಎಂದರು.

ಇದನ್ನೂ ಓದಿ:

ರಾಜ್ಯದ ಎಲ್ಲ ಹಿಂದೂಗಳಿಗೆ ಕರೆ ಕೊಡುತ್ತೇನೆ, ಎಲ್ಲ ಪಾಲಕರು ಮಕ್ಕಳಿಗೆ ತಿಲಕ ಹಾಗೂ ಕೇಸರಿ ಶಾಲ್ ಹಾಕಿ ಶಾಲೆಗೆ ಕಳಿಸಿ. ಇವರು ಹೇಗೆ ವಿರೋಧ ಮಾಡುತ್ತಾರೆ ಹೇಗೆ ತಡಿತಾರೆ ನಾವು ನೋಡುತ್ತೇವೆ ಎಂದು ಗುಡುಗಿದರು.

ಇನ್ನ ಮೇಲೆ ಹಾಜರಾತಿ ವೇಳೆ ವಿದ್ಯಾರ್ಥಿಗಳು ಎಸ್ ಸರ್ ಅನ್ನೋ ಹಾಗಿಲ್ಲ ಬದಲು ಜೈ ಶ್ರೀರಾಮ ಅನ್ನಬೇಕು. ಇನ್ನು ಮೇಲೆ ಶಿಕ್ಷಕರಿಗೆ ನಮಸ್ಕರಾ ಮಾಡುವಾಗ ತಲೆ ಬಾಗಿ ಜೈ ಶ್ರೀರಾಮ ಎನ್ನಬೇಕು ಎಂದು ಕರೆ ಕೊಡುವೆ ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !