May 17, 2026
Sunday, May 17, 2026
spot_img

FOOD | ಸಂಡೇ ಸ್ಪೆಷಲ್ ಡಿನ್ನರ್‌ಗೆ ಟ್ರೈ ಮಾಡಿ ಮಶ್ರೂಮ್ ನೂಡಲ್ಸ್

ವಾರಾಂತ್ಯದ ರಾತ್ರಿ ಮನೆಯಲ್ಲಿ ಸುಲಭವಾಗಿ, ಕಡಿಮೆ ಸಮಯದಲ್ಲಿ ಮತ್ತು ರೆಸ್ಟೋರೆಂಟ್ ಸ್ಟೈಲ್‌ನಲ್ಲಿ ಏನಾದರೂ ಮಾಡಬೇಕು ಅನ್ನಿಸಿದರೆ ಮಶ್ರೂಮ್ ನೂಡಲ್ಸ್ ಟ್ರೈ ಮಾಡಿ.

ಬೇಕಾಗುವ ಸಾಮಗ್ರಿಗಳು:

ನೂಡಲ್ಸ್ – 1 ಪ್ಯಾಕೆಟ್
ಮಶ್ರೂಮ್ (ಅಣಬೆ) – 1 ಕಪ್ (ಸಣ್ಣದಾಗಿ ಕತ್ತರಿಸಿದದ್ದು)
ಈರುಳ್ಳಿ ಅಥವಾ ಸ್ಪ್ರಿಂಗ್ ಆನಿಯನ್ – ಅರ್ಧ ಕಪ್
ಬೆಳ್ಳುಳ್ಳಿ – 5 ಎಸಳು
ಹಸಿಮೆಣಸಿನಕಾಯಿ – 2
ಸೋಯಾ ಸಾಸ್ – 1 ರಿಂದ 2 ಚಮಚ
ವಿನೆಗರ್ – 1 ಚಮಚ
ಕಾಳುಮೆಣಸಿನ ಪುಡಿ – ಅರ್ಧ ಚಮಚ
ಎಣ್ಣೆ – 2 ಚಮಚ
ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ:

ಮೊದಲು ಒಂದು ಪಾತ್ರೆಯಲ್ಲಿ ನೀರು ಕುದಿಸಿ ಅದಕ್ಕೆ ಸ್ವಲ್ಪ ಉಪ್ಪು ಮತ್ತು ಎಣ್ಣೆ ಹಾಕಿ ನೂಡಲ್ಸ್ ಬೇಯಿಸಿಕೊಳ್ಳಿ. ನಂತರ ತಣ್ಣೀರು ಹಾಕಿ ನೀರು ಬಸಿದು ಪಕ್ಕಕ್ಕೆ ಇಡಿ.

ಈಗ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಬೆಳ್ಳುಳ್ಳಿ ಮತ್ತು ಹಸಿಮೆಣಸಿನಕಾಯಿ ಹುರಿಯಿರಿ. ಬಳಿಕ ಈರುಳ್ಳಿ ಮತ್ತು ಮಶ್ರೂಮ್ ಸೇರಿಸಿ ಚೆನ್ನಾಗಿ ಬಾಡಿಸಿ. ಮಶ್ರೂಮ್‌ನ ನೀರಿನಾಂಶ ಕಡಿಮೆಯಾದ ಬಳಿಕ ಸೋಯಾ ಸಾಸ್, ವಿನೆಗರ್ ಹಾಗೂ ಕಾಳುಮೆಣಸಿನ ಪುಡಿ ಸೇರಿಸಿ.

ಕೊನೆಗೆ ಬೇಯಿಸಿದ ನೂಡಲ್ಸ್ ಸೇರಿಸಿ 2 ನಿಮಿಷ ಚೆನ್ನಾಗಿ ಟಾಸ್ ಮಾಡಿ. ಮೇಲಿಂದ ಸ್ಪ್ರಿಂಗ್ ಆನಿಯನ್ ಹಾಕಿದರೆ ರುಚಿ ಮತ್ತಷ್ಟು ಹೆಚ್ಚುತ್ತದೆ.

ಬಿಸಿ ಬಿಸಿ ಮಶ್ರೂಮ್ ನೂಡಲ್ಸ್ ಭಾನುವಾರದ ಡಿನ್ನರ್‌ಗೆ ಸಖತ್ ಮಜಾ ಕೊಡುತ್ತದೆ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !