ಮೇಷ.
ನಿಮ್ಮ ಪಾಲಿಗೆ ವಿಶೇಷ ದಿನ. ಮಹತ್ತರ ಬೆಳವಣಿಗೆ ಸಂಭವ. ಕೌಟುಂಬಿಕ ಬಿಕ್ಕಟ್ಟು ನಿಮಗೆ ಪೂರಕವಾಗಿ ಪರಿಹಾರ ಕಾಣುವುದು.
ವೃಷಭ
ಭಾವನಾತ್ಮಕ ಏರುಪೇರು ಅನುಭವಿ ಸುವಿರಿ. ಆಪ್ತರೊಬ್ಬರ ವರ್ತನೆಯಿಂದ ಮನಸ್ಸಿಗೆ ನೋವು. ಅವರ ಜತೆ ಹೊಂದಾಣಿಕೆ ಸಾಽಸಿರಿ.
ಮಿಥುನ
ನಿಮ್ಮ ವೃತ್ತಿಯ ಮೇಲೆ ಪರಿಣಾಮ ಬೀರುವಂತಹ ಬೆಳವಣಿಗೆ. ನೀವು ವಿವೇಚನೆಯಿಂದ ಹೆಜ್ಜೆ ಇಡಬೇಕು. ಆತುರದ ನಡೆ ಸಲ್ಲದು..
ಕಟಕ
ಕುಟುಂಬದ ಸದಸ್ಯರ ಸಣ್ಣಪುಟ್ಟ ವಾಗ್ವಾದಗಳಿಗೆ ತಲೆ ಕೆಡಿಸಿಕೊಳ್ಳದಿರಿ.ಉದ್ವಿಗ್ನ ಸ್ಥಿತಿಯನ್ನು ಸಮಾಧಾನದಿಂದ ನಿಭಾಯಿಸಿ.
ಸಿಂಹ
ಅಪೂರ್ಣವಾಗಿ ಉಳಿದಿದ್ದ ಮುಖ್ಯ ಕಾರ್‍ಯ ಪೂರ್ಣಗೊಳಿಸುವ ಅವಕಾಶ. ಬಂಧುಗಳಿಂದ ಶುಭಸುದ್ದಿ ಕೇಳುವಿರಿ. ಧನಲಾಭವಿದೆ. ಕನ್ಯಾ
ಬಂಧುಗಳ ಜತೆ ಉತ್ತಮ ಸಮನ್ವಯ. ಇದರಿಂದಾಗಿ ಭಿನ್ನಮತ ನಿವಾರಣೆ. ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚು ಸಕ್ರಿಯ. ಧನಲಾಭ.
ತುಲಾ
ಆಪ್ತೇಷ್ಟರ ಬೇಡಿಕೆ ಗಳನ್ನು ಈಡೇರಿಕೆಯ ಒತ್ತಡ ಆರ್ಥಿಕ ಹೊರೆ ಹೆಚ್ಚಬಹುದು. ಆದರೆ ಮನಸ್ಸಿಗೆ ಹಿತ. ಕೌಟುಂಬಿಕ ಸೌಹಾರ್ದ ಹೆಚ್ಚಳ.
ವೃಶ್ಚಿಕ
ನಿಮ್ಮ ನಿರೀಕ್ಷೆಗಳು ಈಡೇರುವ ದಿನ. ನಿಮ್ಮ ಅಭೀಷ್ಟದ ವಸ್ತು ಖರೀದಿಸುವ ಆಸೆ ಈಡೇರಲಿದೆ. ಕೌಟುಂಬಿಕ ಶಾಂತಿ. ಎಲ್ಲರ ಸಹಕಾರ.
ಧನು
ಆರ್ಥಿಕವಾಗಿ ಉತ್ತಮ ದಿನ. ಜತೆಗೇ ಖರ್ಚೂ ಹೆಚ್ಚಲಿದೆ. ಕೆಲ ವಿಚಾರಗಳಲ್ಲಿ ನಿಮ್ಮ ನಿಲುವಿನಲ್ಲಿ ರಾಜಿ ಮಾಡಿಕೊಳ್ಳ ಬೇಕಾಗುತ್ತದೆ.
ಮಕರ
ಹಿತೈಷಿಗಳು ನಿಮ್ಮಿಂದ ಬಹಳಷ್ಟನ್ನು ನಿರೀಕ್ಷಿಸುತ್ತಾರೆ. ಅವರ ನಿರೀಕ್ಷೆ ಈಡೇರಿಸಲು ಕಠಿಣ ಶ್ರಮ ಪಡಬೇಕಾಗುವುದು..
ಕುಂಭ
ಪ್ರಮುಖ ವಿಷಯ ದಲ್ಲಿ ಹಠಾತ್ ನಿರ್ಧಾರ ತಾಳಬೇಕಾದ ಪ್ರಸಂಗ. ಕಠಿಣ ನಿಲುವು ಅಗತ್ಯ. ನಿಮ್ಮ ಮತ್ತು ಆಪ್ತರ ಹಿತಾಸಕ್ತಿ ಕಾಯ್ದುಕೊಳ್ಳಿ..
ಮೀನ
ಸಣ್ಣಪುಟ್ಟ ಆರೋಗ್ಯ ಸಮಸ್ಯೆ. ಹಿತವಲ್ಲದ ಆಹಾರ ಸೇವಿಸದಿರಿ. ಕೌಟುಂಬಿಕ ಸ್ವಾಸ್ಥ್ಯಕ್ಕೂ ಆದ್ಯತೆ ಕೊಡಿ. ಇಂದು ಖರ್ಚು ಅಽಕವಾದೀತು



